ಹೈದರಾಬಾದ್: ಮಳೆಯಿಂದ ರಕ್ಷಿಸಿಕೊಳ್ಳಲು ರೈಲು ನಿಲ್ದಾಣದ ಬಳಿ ನಿಂತಿದ್ದ ಯುವತಿಯೋರ್ವಳ ತಲೆ ಮೇಲೆ ಸ್ಲಾಬ್ ತುಂಡುಗಳು ಬಿದ್ದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಅಮೀರ್‌ಪೆಟ್ ಮೆಟ್ರೋ ನಿಲ್ದಾಣದ ಬಳಿ ಇಂದು ಸಂಜೆ ನಡೆದಿದೆ.
ಹೈದರಾಬಾದ್ ಮೆಟ್ರೋ ನಿಲ್ದಾಣದ ಬಳಿ ಅವಘಡ.. ಸ್ಲಾಬ್ ತುಂಡುಗಳು ಬಿದ್ದು ಯುವತಿ ಸಾವು.. - ಅಮೀರ್‌ಪೆಟ್ ಮೆಟ್ರೋ ನಿಲ್ದಾಣ
ಹೈದರಾಬಾದ್‌ನ ಅಮೀರ್‌ಪೆಟ್ ಮೆಟ್ರೋ ನಿಲ್ದಾಣದ ಬಳಿ ನಿಂತಿದ್ದ ಯುವತಿಯೋರ್ವಳ ತಲೆ ಮೇಲೆ ಸ್ಲಾಬ್ ತುಂಡುಗಳು ಬಿದ್ದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ.
ಯುವತಿ ಸಾವು
ಹೈದರಾಬಾದ್‌ನ ಕೆಪಿಹೆಚ್‌ಬಿಯ ನಿವಾಸಿ ಹಾಗೂ ಟಿಸಿಎಸ್ ಉದ್ಯೋಗಿ ಮೌನಿಕಾ (24) ಮೃತಪಟ್ಟ ಯುವತಿ.9 ಮೀಟರ್ ಎತ್ತರದಿಂದ ನಿಲ್ದಾಣದ ಮೇಲ್ಮೈ ಗೋಡೆಯ ಹರಿತವಾದ ಗಾರೆ ತುಂಡುಗಳು ಮೌನಿಕಾ ತಲೆ ಮೇಲೆ ಬಿದ್ದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಮೌನಿಕಾಳನ್ನು ಎಲ್ ಆ್ಯಂಡ್ ಟಿ ಮೆಟ್ರೋ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.