ಪಾಲಕ್ಕಾಡ್ ( ಕೇರಳ): ಬುಲ್ಡೋಝರ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಕಾಡಾನೆಯೊಂದು ಜಿಲ್ಲೆಯ ಶೋಲಾಯೋರ್ ಪ್ರದೇಶದಲ್ಲಿ ಮೃತಪಟ್ಟಿದೆ.
ಗಾಯಗಳಿಂದ ನರಳುತ್ತಿದ್ದ ಕೇರಳದ 'ಬುಲ್ಡೋಜರ್' ಆನೆ ಏನೂ ತಿನ್ನಲಾಗದೆ ಸಾವು - A wild elephant died in Palakkad
ತೀವ್ರವಾದ ಗಾಯಗಳಿಂದ ನರಳುತ್ತಿದ್ದ ಕಾಡಾನೆಯೊಂದು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮೃತಪಟ್ಟಿದೆ.
ಗಾಯದಿಂದ ನರಳಿ ಪ್ರಾಣ ಬಿಟ್ಟ ಆನೆ
ಆನೆ ಮೂರು ವಾರಗಳಿಂದ ಬಾಯಿ ನೋವಿನಿಂದ ಬಳಲುತ್ತಿತ್ತು. ಹೀಗಾಗಿ ಅದಕ್ಕೆ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಕೆಲ ತಿಂಗಳಿನಿಂದ ಈ ಆನೆ ಶೋಲಾಯೋರ್ ಪ್ರದೇಶದ ಮನೆ , ಕಟ್ಟಡಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿತ್ತು. ಆ ಬಳಿಕ ಸ್ಥಳೀಯರು ಆನೆಗೆ ಬುಲ್ಡೋಝರ್ ಎಂದು ಹೆಸರಿಟ್ಟಿದ್ದರು.