ಪೆದ್ದಾಪುರ( ತೆಲಂಗಾಣ) :ಇದು ಕರೀಂನಗರ ಜಿಲ್ಲೆ ಜುಲಾಪಲ್ಲಿ ಮಂಡಲದ ಪೆದ್ದಾಪುರ. ಇಲ್ಲಿ ಒಂದು ಸಂಪ್ರದಾಯವಿದೆ. ಪ್ರತಿ ಭಾನುವಾರ ಈ ಗ್ರಾಮದ ಜನ ಮದ್ಯ-ಮಾಂಸ ಮುಟ್ಟುವುದೇ ಇಲ್ಲ. ಇದು ಇಲ್ಲಿನ ವಿಶೇಷ.
ಈ ಪೆದ್ದಾಪುರ ಗ್ರಾಮದಲ್ಲಿ ಪ್ರತಿ ಭಾನುವಾರ ಮದ್ಯ - ಮಾಂಸ ಸ್ವೀಕರಿಸುವುದೇ ಇಲ್ಲ! - ಕರೀಂನಗರ
ಭಾನುವಾರ ಬಂತೆಂದರೆ ಸಾಕು ಹೈದರಾಬಾದ್ನಲ್ಲಿ ಚಿಕನ್-ಮಟನ್ ಅಂಗಡಿಗಳ ಮುಂದೆ ಬಹುದೊಡ್ಡ ಕ್ಯೂ ಕಾಣಿಸಿಕೊಳ್ಳುತ್ತದೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಪ್ರತಿ ಭಾನುವಾರ ಯಾರು ಮದ್ಯ-ಮಾಸ ಸೇವನೆ ಮಾಡಲ್ಲ.
ಭಾನುವಾರ ಬಂತೆಂದರೆ ಬಹಳಷ್ಟು ಜನ ಹೈದರಾಬಾದ್ನಲ್ಲಿ ಮಾಂಸ - ಮದ್ಯಕ್ಕಾಗಿ ಮುಗಿ ಬೀಳ್ತಾರೆ. ಆದರೆ ಈ ಗ್ರಾಮದ ಜನ ಅವೆಲ್ಲವುಗಳಿಂದ ಮುಕ್ತ ಮುಕ್ತ. ಯಾಕೆಂದರೆ ಈ ಗ್ರಾಮದ ದೇವರಾದ ಮಲ್ಲಣ್ಣನಿಗಾಗಿ ಇವರೆಲ್ಲ ಹೀಗೆ ಮಾಡ್ತಾರೆ. ಸ್ಥಳೀಯ ಮಲ್ಲಣ್ಣ ಸ್ವಾಮಿಗೆ ನಡೆದುಕೊಳ್ಳುವ ಇಲ್ಲಿನ ಜನ ಬೆಳಗ್ಗೆಯಿಂದ ಸಸ್ಯಹಾರ ಮಾತ್ರ ಸೇವನೆ ಮಾಡಿ ದೇವರ ಮೊರೆ ಹೋಗುತ್ತಾರೆ. ಪ್ರತಿ ಭಾನುವಾರ ಮನೆಯಲ್ಲಿ ಕೇವಲ ಸಸ್ಯಹಾರಿ ಊಟ ಮಾಡ್ತಾರೆ.
ವರ್ಷಕ್ಕೊಮ್ಮೆ ನಡೆಯುವ ಮಲ್ಲಣ್ಣನ ಜಾತ್ರೆಯಲ್ಲಿ ಆಂಧ್ರಪ್ರದೇಶ ಹಾಗೂ ಪಕ್ಕದ ಮಹಾರಾಷ್ಟ್ರದಿಂದಲೂ ಜನರು ಇಲ್ಲಿಗೆ ಅಗಮಿಸ್ತಾರೆ. ಮನೆಗೆ ಬರುವ ಸಂಬಂಧಿಕರಿಗೂ ಸಸ್ಯಹಾರಿ ಆಹಾರ ಮಾಡಿ ಬಡಿಸುತ್ತಾರೆ. ಕಳೆದ ಅನೇಕ ದಶಕಗಳಿಂದಲೂ ಈ ಸಂಪ್ರದಾಯ ಆಚರಣೆಯಲ್ಲಿರುವುದು ವಿಶೇಷ.