ಕಥುವಾ(ಜಮ್ಮು ಕಾಶ್ಮೀರ):ಕಾಶ್ಮೀರ ವಿಚಾರದಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿರುವ ಉಗ್ರರ ಅತಿದೊಡ್ಡ ಪ್ಲಾನ್ಗೆ ಪೊಲೀಸರು ಬ್ರೇಕ್ ಹಾಕಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ತುಂಬಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಭಾರಿ ಪ್ರಮಾಣದ ಶಸ್ತ್ರಾಸ್ತ್ರ ತುಂಬಿದ್ದ ಲಾರಿ ವಶಕ್ಕೆ...! ಶಂಕಿತ ಉಗ್ರರ ಬಂಧನ - ಕಥುವಾ ಸುದ್ದಿ
ಜಮ್ಮು-ಪಠಾಣ್ಕೋಟ್ ಹೆದ್ದಾರಿಯಲ್ಲಿ ಪೊಲೀಸರು ತಪಾಸಣೆ ನಡೆಸಿದ ವೇಳೆ ಟ್ರಕ್ನಲ್ಲಿ ಆರು ಎಕೆ - 47 ಗನ್ ಪತ್ತೆಯಾಗಿದೆ. ಜೊತೆಗೆ ಟ್ರಕ್ನಲ್ಲಿ ಮದ್ದುಗುಂಡುಗಳು ಸಹ ಕಂಡುಬಂದಿವೆ.
ಜಮ್ಮು-ಪಠಾಣ್ಕೋಟ್ ಹೆದ್ದಾರಿಯಲ್ಲಿ ಪೊಲೀಸರು ತಪಾಸಣೆ ನಡೆಸಿದ ವೇಳೆ ಟ್ರಕ್ನಲ್ಲಿ ಆರು ಎಕೆ -47 ಗನ್ ಪತ್ತೆಯಾಗಿದೆ. ಜೊತೆಗೆ ಟ್ರಕ್ನಲ್ಲಿ ಮದ್ದುಗುಂಡು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಖಾಕಿಪಡೆ ಟ್ರಕ್ ಅನ್ನು ತಕ್ಷಣವೇ ವಶಕ್ಕೆ ಪಡೆದು ಟ್ರಕ್ನಲ್ಲಿದ್ದ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ವಶಕ್ಕೆ ಪಡೆಯಲಾದ ಟ್ರಕ್ ಕಾಶ್ಮೀರದಿಂದ ಪಂಜಾಬ್ ಪ್ರದೇಶಕ್ಕೆ ತೆರಳುತ್ತಿತ್ತು. ಶಂಕಿತ ಉಗ್ರರನ್ನು ವಿಚಾರಣೆ ಮಾಡಲಾಗುತ್ತಿದ್ದು, ಬಂಧಿತರು ವಿಧ್ವಂಸಕ ಕೃತ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೇ ಅಥವಾ ಉಗ್ರರಿಗೆ ಶಸ್ತ್ರಾಸ್ತ್ರ ರವಾನೆ ಮಾಡುತ್ತಿದ್ದರೇ ಎನ್ನುವ ವಿಚಾರವನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.