ಕರ್ನಾಟಕ

karnataka

ETV Bharat / bharat

ಟೀ, ಕಾಫಿ ಜೊತೆ ಮಾಸ್ಕ್​ ಫ್ರೀ.. ಕೊರೊನಾ ಜಾಗೃತಿಗಿಳಿದ ಚಾಯ್​​​ವಾಲಾ!

ವಡೋದರದಲ್ಲಿರುವ ಟೀ ಅಂಗಡಿಯೊಂದರಲ್ಲಿ ಗ್ರಾಹಕರಿಗೆ ಟೀ ಮತ್ತು ಕಾಫಿಯೊಂದಿಗೆ ಮಾಸ್ಕ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಆತ ಈವರೆಗೆ ಸುಮಾರು 650ಕ್ಕೂ ಅಧಿಕ ಮಾಸ್ಕ್​ಗಳನ್ನು ಗ್ರಾಹಕರಿಗೆ ನೀಡಿದ್ದು, ಕೊರೊನಾ ಸೋಂಕು ಸಂಪೂರ್ಣವಾಗಿ ಮರೆಯಾಗುವವರೆಗೂ ಮಾಸ್ಕ್​ ವಿತರಿಸುವುದಾಗಿ ತಿಳಿಸಿದ್ದಾನೆ. ಈ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಚಾಯ್​ವಾಲಾ ಕೈಜೋಡಿಸಿದ್ದಾನೆ.

a-tea-seller-in-vadodara-distributes-free-mask-to-his-customers
ಕೊರೊನಾ ಜಾಗೃತಿಳಿದ ಚಾಯ್​​​ವಾಲಾ..!

By

Published : Dec 3, 2020, 11:20 AM IST

ಅಹಮದಾಬಾದ್ (ಗುಜರಾತ್): ಕೊರೊನಾ ಎರಡನೇ ಅಲೆ ಎಂಬಂತೆ ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಜನರಲ್ಲಿ ಜಾಗೃತಿ ಮೂಡಿಸಲು ಟೀ ಮಾರಾಟಗಾರನೊಬ್ಬ ವಿಭಿನ್ನ ಕೆಲಸ ಮಾಡುತ್ತಿದ್ದಾನೆ.

ವಡೋದರದಲ್ಲಿರುವ ಈ ಟೀ ಅಂಗಡಿ ಮಾಲೀಕ ಗ್ರಾಹಕರಿಗೆ ಟೀ ಮತ್ತು ಕಾಫಿಯೊಂದಿಗೆ ಮಾಸ್ಕ್ ಅನ್ನು ಉಚಿತವಾಗಿ ನೀಡುತ್ತಿದ್ದಾನೆ. ವಡೋದರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚುತ್ತಿದ್ದು, ಸ್ಥಳೀಯ ಆಡಳಿತ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ 1 ಸಾವಿರ ರೂಪಾಯಿ ದಂಡ ವಿಧಿಸುವುದಾಗಿಯೂ ಘೋಷಿಸಿದೆ. ಆದರೆ ಈ ನಿಯಮವನ್ನು ಜನತೆ ಸರಿಯಾಗಿ ಪಾಲಿಸುತ್ತಿರಲಿಲ್ಲ. ಹೀಗಾಗಿ ಟೀ ಅಂಗಡಿಯಾತ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾನೆ.

ಗ್ರಾಹಕರಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಟೀ ಅಂಗಡಿ ಮಾಲೀಕ

ಆತ ಈವರೆಗೆ ಸುಮಾರು 650ಕ್ಕೂ ಅಧಿಕ ಮಾಸ್ಕ್​ಗಳನ್ನು ಗ್ರಾಹಕರಿಗೆ ನೀಡಿದ್ದು, ಕೊರೊನಾ ಸೋಂಕು ಸಂಪೂರ್ಣವಾಗಿ ಮರೆಯಾಗುವವರೆಗೂ ಮಾಸ್ಕ್​ ವಿತರಿಸುವುದಾಗಿ ತಿಳಿಸಿದ್ದಾನೆ. ಕೋವಿಡ್​ ಹೆಚ್ಚುತ್ತಿರುವ ಕಾರಣ ಗುಜರಾತ್​​ ಸರ್ಕಾರವು, ಅಹಮದಾಬಾದ್, ರಾಜ್​ಕೋಟ್, ವಡೋದರಾ ಮತ್ತು ಸೂರತ್​ನಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ.

ABOUT THE AUTHOR

...view details