ಕರ್ನಾಟಕ

karnataka

ETV Bharat / bharat

ವಿಷ ಕಕ್ಕಿದ ಮಗ... ಹೆತ್ತ ತಾಯಿಯಂತಿದ್ದ ದೊಡ್ಡಮ್ಮಳನ್ನೇ ಕೊಂದ! -  ಗುಂಟೂರು ಕೊಲೆ ಸುದ್ದಿ

ಹೆತ್ತ ತಾಯಿಯಂತೆ ಪ್ರೀತಿಯಿಂದ ನೋಡಿಕೊಂಡಿದ್ದ ದೊಡ್ಡಮ್ಮಳನ್ನು ಮಗನೊಬ್ಬ ಟ್ರ್ಯಾಕ್ಟರ್​ ಹತ್ತಿಸಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ವಿಷ ಕಕ್ಕಿದ ಮಗ

By

Published : Nov 10, 2019, 12:24 PM IST

ಗುಂಟೂರು:ತನ್ನ ಸಹೋದರಿ ಮಗನನ್ನು ಸ್ವಂತ ಮಗನೆಂದು ಪ್ರೀತಿ ತೋರಿದ ದೊಡ್ಡಮ್ಮಳನ್ನು ಪುತ್ರನೇ ಕೊಲೆ ಮಾಡಿರುವ ಘಟನೆ ಗುಂಟೂರು ಜಿಲ್ಲೆಯ ಕೊತ್ತಪಾಲೆಂನಲ್ಲಿ ಶನಿವಾರ ನಡೆದಿದೆ.

ಡೆಗಲ ಸುಬ್ಬಮ್ಮ (55) ತನ್ನ ಸಹೋದರಿ ಮಗನಾದ ಪಗಡಂ ರಾಜಶೇಖರ್ ​ರೆಡ್ಡಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಆತನಿಗೆ ಹಣದ ಅವಶ್ಯಕತೆ ಇದ್ದಾಗ ಸುಬ್ಬಮ್ಮ ತನ್ನ ಬಳಿ ಇದ್ದ 160 ಗ್ರಾಂ ಬಂಗಾರ ಕೊಟ್ಟಿದ್ದರು. ಬ್ಯಾಂಕ್​ನಲ್ಲಿ ಬಂಗಾರವನ್ನು ಅಡವಿಟ್ಟು ಆತ ಸಾಲ ಪಡೆದಿದ್ದ. ಬಳಿಕ ಅವುಗಳನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ತನ್ನ ಬಳಿ ಇಟ್ಟುಕೊಂಡಿದ್ದ ರಾಜಶೇಖರ್​ ರೆಡ್ಡಿ.

ಇನ್ನು ರಾಜಶೇಖರ್​ ರೆಡ್ಡಿ ತಮ್ಮ ದೊಡ್ಡಮ್ಮ ಮನೆ ಮುಂದೆ ಟ್ರ್ಯಾಕ್ಟರ್​ನಲ್ಲಿ ಹಾದು ಹೋಗುತ್ತಿದ್ದಾಗ ಸುಬ್ಬಮ್ಮ ನೋಡಿ ಕರೆದಿದ್ದಾರೆ. ಬಂಗಾರ ಕೊಡುವಂತೆ ಕೇಳಿದ್ದಾರೆ. ಈ ಬಗ್ಗೆ ಇಬ್ಬರ ಮಧ್ಯೆ ಜಗಳವಾಗಿದೆ. ಬಂಗಾರ ಕೊಡುವವರೆಗೂ ನಿನ್ನನ್ನು​ ಬಿಡಲ್ಲವೆಂದು ಟ್ರ್ಯಾಕ್ಟರ್ ಮುಂದೆ ನಿಂತಿದ್ದಾರೆ. ಕೋಪಗೊಂಡ ರಾಜಶೇಖರ್​ ರೆಡ್ಡಿ ತನ್ನ ದೊಡ್ಡಮ್ಮಳ ಮೇಲೆ ಟ್ರ್ಯಾಕ್ಟರ್​ ಹತ್ತಿಸಿದ್ದು, ಸುಬ್ಬಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೊಲೆ ಮಾಡಿದ ಬಳಿಕ ರಾಜಶೇಖರ್​ ರೆಡ್ಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details