ಕರ್ನಾಟಕ

karnataka

ETV Bharat / bharat

ತಾಯಿಯ ಅಂತ್ಯ ಸಂಸ್ಕಾರ ಬಿಟ್ಟು ಪೊಲೀಸ್‌ ಅಧಿಕಾರಿಯ ಡ್ಯೂಟಿ: ಕರ್ತವ್ಯ ಪ್ರಜ್ಞೆ ಜೊತೆಗೆ ಸಮಾಜಿಕ ಕಳಕಳಿ

ವಿಜಯವಾಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಬ್ ಇನ್ಸ್‌ಪೆಕ್ಟರ್ ಶಾಂತಾರಾಮ್ ಎಂಬುವರ ತಾಯಿ ಕಳೆದ ಮೂರು ದಿನಗಳ ಹಿಂದೆ ತೀರಿಕೊಂಡಿದ್ದರು. ಮೃತದೇಹದ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಲು ಅವರಿಗೆ ರಜೆಯನ್ನೂ ನೀಡಲಾಗಿತ್ತು.

ತಾಯಿ ಸತ್ತರೂ ಲಾಕ್​ಡೌನ್​ ಡ್ಯುಟಿ ಮಾಡಲು ಮುಂದಾದ ಪೊಲೀಸ್​
ತಾಯಿ ಸತ್ತರೂ ಲಾಕ್​ಡೌನ್​ ಡ್ಯುಟಿ ಮಾಡಲು ಮುಂದಾದ ಪೊಲೀಸ್​

By

Published : Apr 3, 2020, 11:48 AM IST

ವಿಜಯವಾಡ (ಆಂಧ್ರಪ್ರದೇಶ): ಅತ್ಯಂತ ಕಠಿಣ ಸಂದರ್ಭಗಳಲ್ಲೂ ಸೈನಿಕ, ಪೊಲೀಸ್ ಸಿಬ್ಬಂದಿ ಜನ ಸೇವೆಯನ್ನು ಮೊದಲು ಆಯ್ಕೆ ಮಾಡಿಕೊಳ್ಳುತ್ತಾನೆ. ಅಂತೆಯೇ ಇಲ್ಲೋರ್ವ ಪೊಲೀಸ್ ಅಧಿಕಾರಿ​ ತಮ್ಮ ತಾಯಿ ಸಾವಿಗೀಡಾದ ನೋವು ಬದಿಗಿಸಿರಿ ಲಾಕ್​ಡೌನ್​ ಕರ್ತವ್ಯ ನೆರವೇರಿಸಿದ್ದಾರೆ.

ವಿಜಯವಾಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಬ್ ಇನ್ಸ್‌ಪೆಕ್ಟರ್ ಶಾಂತಾರಾಮ್ ಎಂಬುವರ ತಾಯಿ ಕಳೆದ ಮೂರು ದಿನಗಳ ಹಿಂದೆ ತೀರಿಕೊಂಡಿದ್ದರು. ಮೃತದೇಹದ ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲು ಅವರಿಗೆ ರಜೆ ಸಹ ನೀಡಲಾಗಿತ್ತು. ಆದರೆ ಅವರು ಅಂತಿಮ ಕ್ರಿಯೆಗಳಲ್ಲಿ ಭಾಗಿಯಾಗದೆ ಕರ್ತವ್ಯದಲ್ಲೇ ನಿರತರಾಗಿದ್ದರು.!

ಕಾರಣವೇನು?

ನಾನು ಮೂರು ದಿನಗಳ ಹಿಂದೆ ನನ್ನ ತಾಯಿಯನ್ನು ಕಳೆದುಕೊಂಡೆ. ನನ್ನ ತಾಯಿಯ ಕೊನೆಯ ವಿಧಿಗಳಿಗೆ ನಾನು ಹಾಜರಾಗಲು ಬಯಸಿದ್ದೆ. ಆದರೆ, ಅಂತ್ಯಕ್ರಿಯೆಗಾಗಿ ನಾನು ನನ್ನ ಊರಿಗೆ ಹೋಗಬೇಕಾದರೆ ಎರಡು ದಿನಗಳು ಬೇಕು. ಅಲ್ಲದೆ ನಾನು ನಾಲ್ಕು ಜಿಲ್ಲೆಗಳನ್ನು ದಾಟಿ ನಮ್ಮೂರಿಗೆ ತೆರಳಬೇಕು. ಅಲ್ಲಿ 40 ಚೆಕ್‌ಪೋಸ್ಟ್‌ಗಳಿವೆ. ಇದೇ ದಾರಿಯಲ್ಲಿ ಅನೇಕ ಜನರು ಭೇಟಿಯಾಗುತ್ತಾರೆ. ಇದೆಲ್ಲಾ ಮಾರಣಾಂತಿಕ ವೈರಸ್ ಹರಡುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ಅಲ್ಲಿಂದ ವಾಪಸ್​ ಆದ ನಂತರ 15 ದಿನಗಳವರೆಗೆ ಹೋಂ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತದೆ. ಈ ಎಲ್ಲಾ ತೊಂದರೆ ಬೇಡ ಎಂದು ಈ ನಿರ್ಧಾರಕ್ಕೆ ಬಂದೆ ಎಂದು ಶಾಂತಾರಾಮ್ ಹೇಳುತ್ತಾರೆ.

ಅಗತ್ಯವಿದ್ದಲ್ಲಿ ವಿಡಿಯೋ ಕರೆ ಮುಖಾಂತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details