ಪುರಿ: ಒಡಿಶಾದ ಪುರಿಯಲ್ಲಿ ನಡೆಯುವ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆಯು ಕೋವಿಡ್ ಭೀತಿ, ಅನೇಕ ಬಿಕ್ಕಟ್ಟುಗಳ ನಡುವೆಯೂ ಇಂದಿನಿಂದ ಪ್ರಾರಂಭವಾಗಿದೆ. ಆದರೆ, ಮೊದಲ ದಿನವೇ ದೇವಾಲಯದ ಸಿಬ್ಬಂದಿಯೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ರಥಯಾತ್ರೆಗೆ ಬಂದ ಗಣ್ಯರಿಗೆ ಶಾಕ್: ಪುರಿ ದೇವಾಲಯದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ - ಪುರಿ ಜಗನ್ನಾಥ
ಪುರಿ ಜಗನ್ನಾಥ ರಥಯಾತ್ರೆ ಆರಂಭವಾಗಿದ್ದು, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಗಣ್ಯರ ಆತಿಥ್ಯ ವಹಿಸುವ ದೇಗುಲದ 1143 ಸೇವಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಓರ್ವನ ವರದಿ ಪಾಸಿಟಿವ್ ಬಂದಿದೆ.
ಪುರಿ ದೇವಾಲಯ
ಪುರಿಯ ಜಗನ್ನಾಥ ರಥವನ್ನು 500ಕ್ಕಿಂತ ಹೆಚ್ಚು ಜನರು ಸೇರಿ ಎಳೆಯುವಂತಿಲ್ಲ. ರಥಯಾತ್ರೆಯಲ್ಲಿ ಪಾಲ್ಗೊಳ್ಳುವವರೆಲ್ಲರೂ ಕೋವಿಡ್ ಟೆಸ್ಟ್ಗೆ ಒಳಗಾಗಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆ ನಿನ್ನೆ ಗಣ್ಯರ ಆತಿಥ್ಯ ವಹಿಸುವ ದೇಗುಲದ 1143 ಸೇವಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಓರ್ವನ ವರದಿ ಪಾಸಿಟಿವ್ ಬಂದಿದೆ.
ಸೋಂಕಿತನನ್ನು ರಥಯಾತ್ರೆ ಆಚರಣೆ ಆರಂಭವಾಗುವ ಮೊದಲೇ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪುರಿ ಜಿಲ್ಲಾಡಳಿತ ತಿಳಿಸಿದೆ.