ನವದೆಹಲಿ:ತೀಸ್ ಹಜಾರಿ ನ್ಯಾಯಾಲಯದ ಬಳಿ ಪೊಲೀಸರು ಮತ್ತು ವಕೀಲರ ನಡುವೆ ಘರ್ಷಣೆ ಸಂಭವಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಪೊಲೀಸರು-ವಕೀಲರ ನಡುವೆ ಘರ್ಷಣೆ: ಪೊಲೀಸರ ವಾಹನಗಳಿಗೆ ಬೆಂಕಿ - ದೆಹಲಿಯಲ್ಲಿ ಪೊಲೀಸರು ಮತ್ತು ವಕೀಲರ ನಡುವೆ ಗಲಾಟೆ
ದೆಹಲಿ ಪೊಲೀಸರು ಮತ್ತು ವಕೀಲರ ನಡುವೆ ಘರ್ಷಣೆ ಸಮಭವಿಸಿದ್ದು, ಹಲವು ವಕೀಲರು ಗಾಯಗೊಂಡಿದ್ದಾರೆ.
ಪೊಲೀಸರು ವಕೀಲರ ನಡುವೆ ಘರ್ಷಣೆ
ಘಟನೆಯಲ್ಲಿ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಹಲವು ವಕೀಲರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ ನ್ಯಾಯಾಲಯ ಸಂಕೀರ್ಣದಲ್ಲಿ ಪಾರ್ಕಿಂಗ್ ವಿಚಾರ ಸಂಬಂಧ ಪೊಲೀಸರು ಮತ್ತು ವಕೀಲರ ನಡುವೆ ಗಲಾಟೆ ಸಂಭವಿಸಿ, ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.
Last Updated : Nov 2, 2019, 5:26 PM IST
TAGGED:
Tis Hazari court latest news