ಕೃಷ್ಣ ಜಿಲ್ಲೆ:ರೌಡಿಶೀಟರ್ವೋರ್ವ ಬಾಲಕಿ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ತನ್ನ ಬಣ್ಣದ ಮಾತುಗಳಿಂದ ಮೋಡಿ ಮಾಡಿ, ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.
ಶ್ರೀಕಾಕುಳಂ ಜಿಲ್ಲೆಯ ದಂಪತಿ ದುಡಿಮೆಗಾಗಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕೃಷ್ಣ ಜಿಲ್ಲೆಗೆ ಬಂದಿದ್ದರು. ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಕೂಲಿಗೆಂದು ದಂಪತಿ ತೆರಳಿದ್ದಾಗ ಅದೇ ನಗರದ ರೌಡಿಶೀಟರ್ ಸಂಗೇವು ನವೀನ್ ಬಾಲಕಿಯೊಂದಿಗೆ ಪರಿಚಯ ಬೆಳೆಸಿಕೊಂಡು ಮಾಯದ ಮಾತುಗಳನ್ನಾಡಿ ತನ್ನ ಬಲೆಗೆ ಕೆಡವಿಕೊಂಡಿದ್ದ.