ಕೋಲ್ಕತಾ:ಎಲ್ಲೆಡೆ ಕೋವಿಡ್ ಹಾವಳಿ ಹಿನ್ನೆಲೆ ಮಾಸ್ಕ್ ಧರಿಸುವುದೇ ಕೊರೊನಾ ತಡೆಯ ಮೂಲಮಂತ್ರ ಎನ್ನುತ್ತಿರುವಾಗ, ಪಶ್ಚಿಮ ಬಂಗಾಳದ ಹೋಟೆಲ್ ಒಂದು ಕೊರೊನಾ ಹರಡುವಿಕೆ ತಡೆಗೆ ವಿನೂತನ ಪ್ರಯತ್ನ ಮಾಡಿದೆ.
ಈ ಹೋಟೆಲ್ನಲ್ಲಿ ಮಾಸ್ಕ್ ಹಾಕಿಯೇ ಆಹಾರ ಸೇವಿಸಬಹುದು.. - A restaurant in Kolkata is providing mask to customers
ಕೋಲ್ಕತಾದ ಈ ಹೋಟೆಲ್ನಲ್ಲಿ ಮಾತ್ರ ಮಾಸ್ಕ್ ಹಾಕಿಯೇ ಆಹಾರ ಸೇವಿಸಬಹುದು. ಅದಕ್ಕಾಗಿ ತನ್ನ ಗ್ರಾಹಕರಿಗೆ ಜಿಪ್‌ಗಳನ್ನು ಜೋಡಿಸಿರುವ ಮಾಸ್ಕ್ಗಳನ್ನು ಒದಗಿಸುತ್ತಿದೆ.
![ಈ ಹೋಟೆಲ್ನಲ್ಲಿ ಮಾಸ್ಕ್ ಹಾಕಿಯೇ ಆಹಾರ ಸೇವಿಸಬಹುದು.. restaurant in Kolkata is providing its customers masks with zips](https://etvbharatimages.akamaized.net/etvbharat/prod-images/768-512-9222314-thumbnail-3x2-jjj.jpg)
ನಿಂತಾಗ, ಕೂತಾಗ, ಓಡಾಡುವಾಗ ಮಾಸ್ಕ್ ಧರಿಸುವುದು ಸುಲಭ. ಆದರೆ ತಿನ್ನುವಾಗ, ಕುಡಿಯುವಾಗ ಮಾಸ್ಕ್ ತೆಗೆಯಲೇ ಬೇಕು. ಆದರೆ ಕೋಲ್ಕತಾದ ಈ ಹೋಟೆಲ್ನಲ್ಲಿ ಮಾತ್ರ ಮಾಸ್ಕ್ ಹಾಕಿಯೇ ಆಹಾರ ಸೇವಿಸಬಹುದು. ಅದಕ್ಕಾಗಿ ಕೋಲ್ಕತಾದ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಜಿಪ್‌ಗಳನ್ನು ಜೋಡಿಸಿರುವ ಮಾಸ್ಕ್ಗಳನ್ನು ಒದಗಿಸುತ್ತಿದೆ. ಮಾಸ್ಕ್ಗೆ ಜಿಪ್ ಅಳವಡಿಸಿದ ಕಾರಣ, ಆಹಾರ ಸೇವಿಸುವಾಗ ಜಿಪ್ ತೆರೆದು, ಮಾಸ್ಕ್ ಹಾಕಿಯೇ ಸೇವನೆ ಮಾಡಬಹುದಾಗಿದೆ.
ನಾವು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಗ್ರಾಹಕರಿಗೆ ಜಿಪ್ ಇರುವ ಮಾಸ್ಕ್ಗಳನ್ನು ಒದಗಿಸುತ್ತಿದ್ದೇವೆ. ಇದು ಕಡ್ಡಾಯವಲ್ಲ. ಅವರು ಬಯಸಿದರೆ ಮಾತ್ರ ಧರಿಸಬಹುದು ಎಂದು ರೆಸ್ಟೋರೆಂಟ್ ಮಾಲೀಕರು ಹೇಳಿದ್ದಾರೆ.