ಬೆಂಗಳೂರು: ಮಂಗಳ ಗ್ರಹದ ಅತಿದೊಡ್ಡ ಉಪಗ್ರಹವಾಗಿರುವ 'ಫೋಬೋಸ್'ನ ಇತ್ತೀಚಿನ ಚಿತ್ರವನ್ನು ಭಾರತದ ಮಾರ್ಸ್ ಆರ್ಬಿಟರ್ ಮಿಷನ್ (MOM) ಸೆರೆ ಹಿಡಿದಿದೆ.
ಮಂಗಳ ಗ್ರಹದ ಅತಿದೊಡ್ಡ ನಿಗೂಢ ಉಪಗ್ರಹ 'ಫೋಬೋಸ್' ಚಿತ್ರ ಸೆರೆ - ಮಾರ್ಸ್ ಆರ್ಬಿಟರ್ ಮಿಷನ್
ಮಂಗಳ ಗ್ರಹದ ಅತಿದೊಡ್ಡ ಹಾಗೂ ಅತಿ ಸಮೀಪದಲ್ಲಿರುವ ಉಪಗ್ರಹವಾದ 'ಫೋಬೋಸ್'ನ ಇತ್ತೀಚಿನ ಚಿತ್ರವನ್ನು ಇಸ್ರೋದ ಮಾರ್ಸ್ ಆರ್ಬಿಟರ್ ಮಿಷನ್ ಸೆರೆ ಹಿಡಿದಿದೆ.
ಫೋಬೋಸ್
ಮಂಗಳ ಗ್ರಹದಿಂದ 7,200 ಕಿ.ಮೀ ಹಾಗೂ ಫೋಬೋಸ್‌ನಿಂದ 4,200 ಕಿ.ಮೀ ಅಂತರದಲ್ಲಿದ್ದ ಮಾರ್ಸ್ ಆರ್ಬಿಟರ್ ಮಿಷನ್, ಜುಲೈ 1 ರಂದು ಮಾರ್ಸ್ ಕಲರ್ ಕ್ಯಾಮೆರಾ (ಎಂಸಿಸಿ) ಮೂಲಕ ಚಿತ್ರವನ್ನು ಸೆರೆ ಹಿಡಿದಿದೆ. ಫೋಬೋಸ್, ಮಂಗಳಕ್ಕೆ ಅತಿ ಸಮೀಪದಲ್ಲಿರುವ ಉಪಗ್ರಹ ಕೂಡ ಆಗಿದೆ.
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಮಾರ್ಸ್ ಆರ್ಬಿಟರ್ ಮಿಷನ್, ಮಂಗಳ ಗ್ರಹದ ಅನ್ವೇಷಣೆಗೆ ಭಾರತ ಕಳುಹಿಸಿರುವ ಮಂಗಳಯಾನ ನೌಕೆಯಾಗಿದೆ. ಇದನ್ನು 2013 ರ ನವೆಂಬರ್ 5 ರಂದು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.