ರಾಜಸ್ಥಾನ:ಹಿಮಾಲಯದಲ್ಲಿ ಬೆಳೆಯುವ ವರ್ಮಿಲಿಯನ್ ಅಥವಾ ಸಿಂಧೂರ ಗಿಡವು ರಾಜಸ್ಥಾನದಲ್ಲಿ ಕಂಡು ಬರುವುದು ಬಲು ಅಪರೂಪ. ಆದರೆ ಅಜ್ಮೀರ್ ನಗರದ ಅಶೋಕ್ ಜಟೋಲಿಯಾ ಎಂಬುವವರು ಸಿಂಧೂರದ ಗಿಡವನ್ನು ನೆಟ್ಟಿದ್ದಾರೆ. ಈ ಗಿಡವು ಜನರ ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದ್ದು, ಅವರ ಧಾರ್ಮಿಕ ನಂಬಿಕೆಯನ್ನು ಹೆಚ್ಚಿಸಿದೆ. ನೈಸರ್ಗಿಕ ಸಿಂಧೂರವನ್ನು ತೆಗೆದುಕೊಂಡು ಹೋಗಲು ಅಲ್ಲಿ ಜನರು ಸೇರುತ್ತಾರೆ. ಹಾಗೂ ದೀಪಾವಳಿಯಂದು ಈ ಪವಿತ್ರ ಗಿಡಕ್ಕೆ ಪೂಜೆ ಮಾಡಲಾಗುತ್ತದೆ.
ಸಿಂಧೂರವನ್ನು ತಯಾರಿಸಲಾಗಿಲ್ಲ. ಅದು ಪ್ರಕೃತಿಯ ಉತ್ಪನ್ನ ಎಂದು ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಸಿಂಧೂರ ಗಿಡವನ್ನುಇಂಗ್ಲಿಷ್ನಲ್ಲಿ ಕಲಿಮಾ ಎಂದು ಕರೆಯುತ್ತಾರೆ. ಈ ಗಿಡ ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಕಂಡು ಬರುತ್ತದೆ. ಅಶೋಕ್ ಅವರ ಮನೆಯಲ್ಲಿರುವ ಏಕೈಕ ಸಿಂಧೂರ ಗಿಡವು, ಜನರಿಗೆ ನಂಬಿಕೆಯ ಕೇಂದ್ರವಾಗಿದೆ. ಜನರು ಮರವನ್ನು ಪವಿತ್ರವೆಂದು ನೋಡುತ್ತಾರೆ ಮತ್ತು ಅದರಿಂದ ಬರುವ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಮೊದಲು ಅದು ಸಿಂಧೂರದ ಗಿಡವೆಂದು ಅಶೋಕ್ ಅವರಿಗೆ ತಿಳಿದಿರಲಿಲ್ಲ. ಅವರು ಏಳು ವರ್ಷಗಳ ಹಿಂದೆ ಭೋಪಾಲ್‌ನಿಂದ ಸಸಿ ತಂದು ತಮ್ಮ ತೋಟದಲ್ಲಿ ನೆಟ್ಟಿದ್ದಾರೆ. ಆ ಸಸಿ ಬೆಳೆದು ಫಲವನ್ನು ನೀಡಲು ಪ್ರಾರಂಭಿಸಿದಾಗ, ಅದು ಸಿಂಧೂರ ಗಿಡ ಎಂದು ಗೊತ್ತಾಗಿದೆ. ಈ ಗಿಡದ ಬಗ್ಗೆ ತಿಳಿದ ನಂತರ ಬಾಲಾಜಿ ಮತ್ತು ಗಣೇಶನ ಭಕ್ತರು ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.