ಮುಂಬೈ:ಇತ್ತೀಚೆಗೆ ಭಾರತ ಪ್ರವಾಸ ಕೈಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗಾಗಿ ಏರ್ಪಡಿಸಿದ್ದ ವಿಶೇಷ ಭೋಜನಕೂಟದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎ. ಆರ್. ರಹಮಾನ್ ಕೂಡ ಅತಿಥಿಯಾಗಿದ್ದರು.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಭೋಜನಕೂಟದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರೊಂದಿಗೆ 'ಜೈ ಹೋ' ಹಾಡಿನ ಸಂಯೋಜಕ ರಹಮಾನ್ ಭಾಗವಹಿಸಿದ್ದು, ಇದೇ ವೇಳೆ, ಕೆಲಕಾಲ ಕೋತಿಯೊಂದಿಗೆ ಕಾಲ ಕಳೆದು ಎಂಜಾಯ್ ಮಾಡಿದ್ದಾರೆ.