ಕರ್ನಾಟಕ

karnataka

ETV Bharat / bharat

ಸಂಗಾತಿ ಮೆಚ್ಚಿಸಲು ಟಿಕ್​ಟಾಕ್​ ವಿಡಿಯೋ: ಹೆಬ್ಬಾವು ಕಚ್ಚಿ ಆಸ್ಪತ್ರೆ ಸೇರಿದ ಯುವಕ! - ಹೆಬ್ಬಾವು ಕಚ್ಚಿ ಆಸ್ಪತ್ರೆ ಸೇರಿದ ಯುವಕ

ಪ್ರೀತಿಸುತ್ತಿದ್ದ ಹುಡುಗಿಯನ್ನು ಮೆಚ್ಚಿಸಲು TIkTok ವಿಡಿಯೋ​ ಮಾಡುತ್ತಿದ್ದಾಗ ಹೆಬ್ಬಾವಿನಿಂದ ಕಚ್ಚಿಸಿಕೊಂಡಿರುವ ಯುವಕ ಇದೀಗ ಆಸ್ಪತ್ರೆ ಸೇರಿಕೊಂಡಿದ್ದಾನೆ.

ಟಿಕ್​​ ಟಾಕ್​ ಮಾಡಲು ಹೋಗಿ ಹೆಬ್ಬಾವು ಕಚ್ಚಿಸಿಕೊಂಡ ಯುವಕ

By

Published : Nov 14, 2019, 2:27 PM IST

ದೇವಾಸ್​​​(ಮಧ್ಯಪ್ರದೇಶ):ಇಂದಿನ ಯುವ ಪೀಳಿಗೆಯಲ್ಲಿ ಮೊಬೈಲ್‌ ಟಿಕ್‌​ಟಾಕ್ ಆ್ಯಪ್​ ಹುಚ್ಚು ಎಷ್ಟರ ಮಟ್ಟಿಗೆ ಇದೆ ಅಂದ್ರೆ ವಿಡಿಯೋ ತೆಗೆದುಕೊಳ್ಳಲು ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಹಂತ ತಲುಪಿದ್ದಾರೆ. ಇಷ್ಟಕ್ಕೂ ಇಂಥ ಅನೇಕ ಘಟನೆಗಳು ನಡೆದು ಹೋಗಿವೆ. ಇದಕ್ಕೆ ಲೇಟೆಸ್ಟ್‌ ಉದಾಹರಣೆ ಇಲ್ಲಿದೆ ನೋಡಿ.

ಮಧ್ಯಪ್ರದೇಶದ ದೇವಾಸ್​​​ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಬೆಹಾರಿ ಫೇಟ್ನ್​​​ ಸಮುದಾಯ ಕಟ್ಟಡದಲ್ಲಿ ಹೆಬ್ಬಾವು ಕಂಡು ಬಂದಿದೆ. ಈ ಬಗ್ಗೆ ಕುತೂಹಲ ಹೆಚ್ಚಿಸಿಕೊಂಡ ಯಶ್​ ಎಂಬ ಯುವಕ ತಕ್ಷಣ ಹಾವಿನ ಸನಿಹ ಕುಳಿತು ಸಣ್ಣದೊಂದು ಟಿಕ್‌ಟಾಕ್​ ವಿಡಿಯೋ ಮಾಡೋಕೆ ಮುಂದಾಗಿದ್ದಾನೆ.

ಟಿಕ್​​ ಟಾಕ್​ ಮಾಡಲು ಹೋಗಿ ಹೆಬ್ಬಾವು ಕಚ್ಚಿಸಿಕೊಂಡ ಯುವಕ

ವಿಡಿಯೋ ಮಾಡಲು ಆತನ ಸಂಗಾತಿಗೆ ಹೇಳಿ ಮೊಬೈಲ್ ಆಕೆಯ ಕೈಯಲ್ಲಿ​ ಕೊಟ್ಟಿದ್ದಾನೆ. ಟಿಕ್‌ಟಾಕ್​ ಮಾಡಲು ಆತ ಮುಂದಾಗ್ತಿದ್ದಂತೆ ಹೆಬ್ಬಾವು ಏಕಾಏಕಿ ಆತನ ಕೈಗೆ ಕಚ್ಚಿಬಿಟ್ಟಿದೆ. ಘಟನೆಯಿಂದ ಗಾಯಗೊಂಡ ಯುವಕನನ್ನು ಸಮುದಾಯ ಆರೋಗ್ಯ ಭವನಕ್ಕೆ ಸೇರಿಸಲಾಗಿದೆ. ಈ ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ABOUT THE AUTHOR

...view details