ಕರ್ನಾಟಕ

karnataka

ETV Bharat / bharat

ಪುಣ್ಯಕ್ಷೇತ್ರದಲ್ಲೊಬ್ಬ ಪ್ಲಾಸ್ಟಿಕ್‌ ವಿರುದ್ಧ ಸೆಣಸಾಡುವ ಪೂಜಾರಿ.. - ಬೈಕ್​ ಮೇಲೆ ಪ್ಲಾಸ್ಟಿಕ್​ ನಿರ್ಮೂಲನೆ ಪ್ರಚಾರ ಫಲಕ ನ್ಯೂಸ್​​

ಜಾರ್ಖಂಡ್‌ನ ಧಿಯೋಘರ್‌ನಲ್ಲಿ ಪೂಜಾರಿಯೊಬ್ಬರು ಪ್ಲಾಸ್ಟಿಕ್​​ ನಿರ್ಮೂಲನೆಗೆ ಪಣ ತೊಟ್ಟಿದ್ದು, ದೇಶದ ಗಮನ ಸೆಳೆದಿದ್ದಾರೆ.

plastic
ಪೂಜಾರಿಯಿಂದ ಪ್ಲಾಸ್ಟಿಕ್​​ ಜಾಗೃತಿ

By

Published : Dec 18, 2019, 7:04 AM IST


ಜಾರ್ಖಂಡ್​​: ಪುಣ್ಯಕ್ಷೇತ್ರಕ್ಕೆ ಭಕ್ತರು ಯಾತ್ರೆಗೆ ಹೋಗೋದು ಮಾಮೂಲು. ಭಕ್ತಿ ಹೆಸರಿನಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಪ್ರಕೃತಿಗೆ ಹಾನಿ ಆಗುವಂತೆ ಸಿಕ್ಕಾಪಟ್ಟೆ ತ್ಯಾಜ್ಯ ಎಸೆದು ಬರ್ತಾರೆ. ಇಲ್ಲೊಬ್ಬ ಪೂಜಾರಿ ಬರೀ ದೇವರ ನಾಮಸ್ಮರಣೆ ಅಷ್ಟೇ ಅಲ್ಲ, ಪ್ಲಾಸ್ಟಿಕ್‌ ವಿರುದ್ಧವೂ ಸೆಣಸಾಡುತ್ತಿದ್ದಾರೆ. ಅದು ಕೂಡ ದೇವರ ನಾಮಸ್ಮರಣೆಯಷ್ಟೇ ಪವಿತ್ರ ಅಂತಾ ತೋರಿಸ್ತಿದ್ದಾರೆ.

ಜಾರ್ಖಂಡ್‌ನ ಧಿಯೋಘರ್​ ಪುಣ್ಯಕ್ಷೇತ್ರ. ಶ್ರಾವಣದಲ್ಲಿ ಭಕ್ತರು ಕಾಲಿಡಲೂ ಜಾಗ ಇರಲ್ಲ. ಹಣ್ಣು-ಕಾಯಿ ತುಂಬಲು ಬಳಸುವ ಏಕ ಬಳಕೆ ಪ್ಲಾಸ್ಟಿಕ್‌ನಿಂದ ಇಲ್ಲಿ ತ್ಯಾಜ್ಯದ ರಾಶಿ ಇರುತ್ತೆ. ಮಹೇಶ್ ಪಂಡಿತ್‌ ಇವರು ಇಲ್ಲಿನ ಪೂಜಾರಿ. ಜನರಿಗೆ ಪ್ಲಾಸ್ಟಿಕ್​ನ ವಿರುದ್ಧ ಜಾಗೃತಿ ಮೂಡಿಸಲು ಮುಂದಾದರೂ ಆರಂಭದಲ್ಲಿ ಅದು ಕೈಗೂಡಲಿಲ್ಲ. 3 ವರ್ಷದಿಂದ ಪ್ಲಾಸ್ಟಿಕ್​ ವಿರುದ್ಧದ ಫಲಕವನ್ನ ತನ್ನ ಬೈಕ್​ಗೆ ಹಾಕಿ ನಗರದ ಬೀದಿ ಬೀದಿ ತಿರುಗಿದರು.

ಪೂಜಾರಿಯಿಂದ ಪ್ಲಾಸ್ಟಿಕ್​​ ನಿರ್ಮೂಲನಾ ಜಾಗೃತಿ..

ಈಗ ಇಲ್ಲಿನ ಜನ ಹೆಚ್ಚು ಜಾಗೃತರಾಗ್ತಿದಾರೆ. ಏಕ ಬಳಕೆ ಪ್ಲಾಸ್ಟಿಕ್​ ಉಪಯೋಗಿಸುವವರ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ. ಮಹೇಶ್​ ಜನರೊಂದಿಗೆ ಬೆರೆತು ಪ್ಲಾಸ್ಟಿಕ್‌ ವಿರುದ್ಧದ ಜಾಗೃತಿ ಜತೆಗೆ ಅದರ ಬಳಕೆ ನಿಯಂತ್ರಿಸಲು ಶ್ರಮಿಸುತ್ತಿರೋದನ್ನ, ಪ್ರಧಾನಿ ಮೋದಿ ಕೂಡ ಗುರುತಿಸಿ ಪ್ರೋತ್ಸಾಹಿಸಿದ್ದಾರೆ. ಜತೆಗೆ ಜಿಲ್ಲಾಡಳಿತ ಏಕ ಬಳಕೆ ಪ್ಲಾಸ್ಟಿಕ್ ನಿರ್ಮೂಲನೆಯ ಬ್ರಾಂಡ್ ಅಂಬಾಸಿಡರನ್ನಾಗಿ ನೇಮಿಸಲು ಮುಂದಾಗಿದೆ.

2017ರಲ್ಲೇ ಜಾರ್ಖಂಡ್​ ಸರ್ಕಾರ ಪ್ಲಾಸ್ಟಿಕ್​ ಬಳಕೆಗೆ ಸಂಪೂರ್ಣ ತಡೆ ಹಾಕಿದೆ. ಆದರೂ ಪ್ಲಾಸ್ಟಿಕ್​ ಬಳಸುವವರಲ್ಲಿ ಯಾವುದೇ ಬದಲಾವಣೆ ಕಂಡಿರಲಿಲ್ಲ. ಮಹೇಶ್​ ಪಂಡಿತರು ತಾವೇ ಜನರೊಂದಿಗೆ ಬೆರೆತು ಜಾಗೃತಿ ಮೂಡಿಸುವ ನಡೆಯಿಂದಾಗಿ ಈ ಪುಣ್ಯ ಕ್ಷೇತ್ರದಲ್ಲಿ ಉತ್ತಮ ಸುಧಾರಣೆ ಕಾಣಿಸ್ತಿದೆ. ಇಂತಹವರ ಸಂಖ್ಯೆ ಹೆಚ್ಚಾದ್ರೆ ಸುತ್ತಮುತ್ತಲಿನ ಪ್ರಕೃತಿ ಮಾಲಿನ್ಯದಿಂದ ಮುಕ್ತವಾಗಲಿದೆ.

For All Latest Updates

TAGGED:

ABOUT THE AUTHOR

...view details