ನಬರಂಗಪುರ (ಒಡಿಶಾ): ರಸ್ತೆ ಸಂಪರ್ಕ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಗರ್ಭಿಣಿಯೊಬ್ಬಳನ್ನು ಕುಟುಂಬಸ್ಥರು ಸ್ಟ್ರೆಚರ್ ಮೂಲಕ ಸುಮಾರು 4 ಕಿಮೀ ಹೊತ್ತು ಸಾಗಿ ಬಳಿಕ ಆಸ್ಪತ್ರೆಗೆ ದಾಖಲಿಸಿರುವ ಅಮಾನವೀಯ ಘಟನೆ ನಬರಂಗ್‌ಪುರ ಜಿಲ್ಲೆಯ ಮೈದಾಲ್‌ಪುರ ಗ್ರಾಮದಲ್ಲಿ ನಡೆದಿದೆ.
ಭಾನುವಾರದಂದು ದಮೀ ಸಂತ ಎಂಬಾಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದು, ಕಳಪೆ ರಸ್ತೆ ಹಿನ್ನೆಲೆಯಲ್ಲಿ ಬರಲು ಅಸಾಧ್ಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ಹಾನಿಗೊಳಗಾಗಿದೆ. ಇನ್ನು ಇದೇ ರಸ್ತೆಯಲ್ಲಿ ಗರ್ಭಿಣಿಯನ್ನು ಕುಟುಂಬದ ಸದಸ್ಯರು ಕಾಲ್ನಡಿಗೆ ಮೂಲಕವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.