ಮೀರತ್: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಗಣತಿಗೆ ಬಂದಿದ್ದಾರೆಂದು ತಪ್ಪಾಗಿ ಭಾವಿಸಿ ಗ್ರಾಮಕ್ಕೆ ಬಂದ ಪೋಲಿಯೋ ಲಸಿಕಾ ತಂಡವನ್ನು ಸ್ಥಳೀಯರು ಥಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
NPR ಗಣತಿಗೆ ಬಂದಿದ್ದಾರೆಂದು ಪೋಲಿಯೋ ಲಸಿಕಾ ತಂಡವನ್ನು ಥಳಿಸಿದ ಸ್ಥಳೀಯರು - ಪೋಲಿಯೊ ಲಸಿಕಾ ತಂಡವನ್ನು ಥಳಿಸಿದ ಸ್ಥಳೀಯರು
ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಗಣತಿಗೆ ಬಂದಿದ್ದಾರೆಂದು ಅನುಮಾನಿಸಿ ಪೋಲಿಯೋ ಲಸಿಕಾ ತಂಡವನ್ನು ಸ್ಥಳೀಯರು ಥಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದ್ದು, ತಂಡವನ್ನು ಸ್ಥಳೀಯರಿಂದ ಪೊಲೀಸರು ರಕ್ಷಿಸಿದ್ದಾರೆ.
![NPR ಗಣತಿಗೆ ಬಂದಿದ್ದಾರೆಂದು ಪೋಲಿಯೋ ಲಸಿಕಾ ತಂಡವನ್ನು ಥಳಿಸಿದ ಸ್ಥಳೀಯರು Meerut latest news](https://etvbharatimages.akamaized.net/etvbharat/prod-images/768-512-5854473-thumbnail-3x2-megha.jpg)
ಪೋಲಿಯೊ ಲಸಿಕಾ ತಂಡ
ಭಾನುವಾರ ಪೋಲಿಯೋ ಲಸಿಕಾ ತಂಡವೊಂದು ಮೀರತ್ನ ಗ್ರಾಮವೊಂದರಲ್ಲಿ ಶಿಬಿರ ನಡೆಸುತ್ತಿದ್ದು, ಪೋಲಿಯೋ ಸಮೀಕ್ಷೆಯ ಭಾಗವಾಗಿ ಸ್ಥಳೀಯರ ಬಳಿ ಅವರ ಮಕ್ಕಳ ಕುರಿತು ಕೆಲ ಮಾಹಿತಿಗಳನ್ನು ಕೇಳಿದ್ದಾರೆ. ಆದರೆ ಸ್ಥಳೀಯರು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಗಣತಿಗೆ ಬಂದಿದ್ದು, ಈ ರೀತಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆಂದು ಅನುಮಾನಿಸಿ ತಂಡದ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ರಾಜ್ಕುಮಾರ್ ತಿಳಿಸಿದ್ದಾರೆ.
ಬಳಿಕ ಪೋಲಿಯೋ ಲಸಿಕಾ ತಂಡವನ್ನು ಸ್ಥಳೀಯರಿಂದ ಪೊಲೀಸರು ರಕ್ಷಿಸಿದ್ದಾರೆ.