ನವದೆಹಲಿ:ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ದುಗೊಂಡಿದ್ದು, ಅದನ್ನು ಪ್ರಶ್ನೆ ಮಾಡಿ ಕಾಶ್ಮೀರದ ಲಾಯರ್ ಒಬ್ಬ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಕಾಶ್ಮೀರದ ಲಾಯರ್ ಶಕೀರ್ ಶಬ್ಬಿರ್ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿಯಲ್ಲಿ ಎಲ್ಲ ರೀತಿಯ ಮಾವನ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆಗಸ್ಟ್ 5ರಂದು ರಾಜ್ಯಸಭೆಯಲ್ಲಿ ಬಿಲ್ ಪಾಸ್ ಆಗುತ್ತಿದ್ದಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅದಕ್ಕೆ ಅಂಗೀಕಾರ ಹಾಕಿದ್ದರು. ಇದಾದ ಮರುದಿನ ಬಿಲ್ ಲೋಕಸಭೆಯಲ್ಲೂ ಅಂಗೀಕಾರವಾಗಿತ್ತು.