ಕರ್ನಾಟಕ

karnataka

ETV Bharat / bharat

ಕೊರೊನಾ ಅಟ್ಟಹಾಸಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿ ; 181ಕ್ಕೆ ಸೋಂಕಿತರ ಏರಿಕೆ.. - ಶ್ರೀರಾಮುಲು

ಇಂದು ಹೊಸದಾಗಿ ಆರು ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಸೋಂಕಿತರ ಸಂಖ್ಯೆ 181ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್​ ಮಾಡಿದ್ದಾರೆ.

corona
ಕೊರೊನಾ

By

Published : Apr 8, 2020, 1:16 PM IST

ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದೆ.‌ ನಿನ್ನೆ ಕಲಬುರಗಿಯ 65 ವರ್ಷದ ವೃದ್ಧನೋರ್ವ ಸೋಂಕಿಗೆ ಮೃತಪಟ್ಟಿದ್ದಾನೆಂದು ವರದಿಯಾಗಿದೆ. ಇದರಿಂದ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ ರಾಜ್ಯದಲ್ಲಿ 5ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ ಆರು ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಸೋಂಕಿತರ ಸಂಖ್ಯೆ 181ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್​ ಮಾಡಿದ್ದಾರೆ.

ಇಂದು ಪತ್ತೆಯಾದ ಸೋಂಕಿತರ ವಿವರ ಹೀಗಿದೆ..

*ರೋಗಿ-176: ಉತ್ತರ ಕನ್ನಡದ 26 ವರ್ಷದ ಯುವತಿಗೆ ಸೋಂಕು ತಗುಲಿದೆ. ಈಕೆ ದುಬೈನಿಂದ ಬಂದವರೊಡನೆ ಸಂಪರ್ಕವಿತ್ತು. ಭಟ್ಕಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

*ರೋಗಿ-177: ಈತ ಕಲಬುರಗಿಯ 65 ವರ್ಷದ ವ್ಯಕ್ತಿಯಾಗಿದ್ದು, ನಿನ್ನೆ ಸಾವನ್ನಪ್ಪಿದ್ದಾರೆ.


*ರೋಗಿ-178: ಇವರು ಕಲಬುರಗಿಯ 72 ವರ್ಷದ ವೃದ್ಧೆ. 175ನೇ ರೋಗಿಯ ತಾಯಿಯಾಗಿದ್ದಾರೆ. ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

*ರೋಗಿ-179: ಮಂಡ್ಯದ 35 ವರ್ಷದ ವ್ಯಕ್ತಿ. 134 ಮತ್ತು 138ರ ರೋಗಿಗಳೊಡನೆ ಸಂರ್ಪಕ ಹೊಂದಿದ್ದ. ಇವರಿಗೆ ಚಿಕಿತ್ಸೆ ಮುಂದುವರೆದಿದೆ.

*ರೋಗಿ-180: ಚಿಕ್ಕಬಳ್ಳಾಪುರದ 23 ವರ್ಷದ‌ ಯುವಕನಿಗೆ ಸೋಂಕು ತಗುಲಿದೆ. ದೆಹಲಿಗೆ ಪ್ರಯಾಣ ಮಾಡಿದ ಹಿನ್ನೆಲೆ ಇದೆ. ಚಿಕ್ಕಬಳ್ಳಾಪುರದಲ್ಲಿ ಚಿಕಿತ್ಸೆ ಮುಂದುವರೆದಿದೆ.

*ರೋಗಿ-181: ಬೆಂಗಳೂರಿನ 27 ವರ್ಷದ ಯುವತಿ. ದೆಹಲಿಗೆ ತೆರಳಿದ‌ ಹಿನ್ನೆಲೆ ಇದೆ. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details