ಬೌಧ್(ಒಡಿಶಾ) :ವಿವಿಧ ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಎರಡು ವರ್ಷಗಳ ಕಾಲ ತೆರಿಗೆ ಪಾವತಿಸದ ಕಾರಣ ಬೌಧ್ನ ಖಾಸಗಿ ಬಸ್ ಮಾಲೀಕರಿಗೆ 6 ಲಕ್ಷದ 72 ಸಾವಿರದ 445 ರೂಪಾಯಿ ದಂಡ ವಿಧಿಸಲಾಗಿದೆ.
ವಿವಿಧ ಸಂಚಾರಿ ನಿಯಮ ಉಲ್ಲಂಘನೆ: ಖಾಸಗಿ ಬಸ್ ಮಾಲೀಕನಿಗೆ 6.72 ಲಕ್ಷ ರೂ ದಂಡ - ಖಾಸಗಿ ಬಸ್ ಮಾಲೀಕನಿಗೆ 6.72 ಲಕ್ಷ ದಂಡ
ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಮತ್ತು ತೆರಿಗೆ ಪಾವತಿಸದ ಕಾರಣ ಮಿನಾರ್ ಬಸ್ ಮಾಲೀಕನಿಗೆ 6 ಲಕ್ಷದ 72 ಸಾವಿರದ 445 ರೂಪಾಯಿ ದಂಡ ವಿಧಿಸಲಾಗಿದೆ.
ಖಾಸಗಿ ಬಸ್ ಮಾಲೀಕನಿಗೆ 6.72 ಲಕ್ಷ ದಂಡ
ಮೂಲಗಳ ಪ್ರಕಾರ, ಜಿಲ್ಲೆಯಲ್ಲಿ ವಾಹನ ತಪಾಸಣೆ ವೇಳೆ ‘ಮಿನಾರ್’ ಹೆಸರಿನ ಬಸ್ ಅನ್ನು ತಡೆಹಿಡಿಯಲಾಗಿದೆ. ಸಂಚಾರಿ ಪೊಲೀಸರು ಕೇಳಿದ ದಾಖಲೆಗಳನ್ನು ಒದಗಿಸಲು ಚಾಲಕ ವಿಫಲನಾಗಿದ್ದಾನೆ. ಹೀಗಾಗಿ ನೂತನ ಮೊಟಾರು ವಾಹನ ಕಾಯ್ದೆ ಪ್ರಕಾರ, ಭಾರಿ ಪ್ರಮಾಣದ ದಂಡ ವಿಧಿಸಲಾಗಿದೆ.
ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಮತ್ತು 2 ವರ್ಷ ತೆರಿಗೆ ಪಾವತಿಸದ ಕಾರಣ ಮಿನಾರ್ ಬಸ್ ಮಾಲೀಕರಿಗೆ 6 ಲಕ್ಷದ 72 ಸಾವಿರದ 445 ರೂಪಾಯಿ ದಂಡ ವಿಧಿಸಲಾಗಿದೆ. ಗಮನಿಸಬೇಕಾದ ಅಂಶ ಏನೆಂದರೆ ಕಳೆದ ನಾಲ್ಕು ದಿನದ ಹಿಂದಷ್ಟೇ ರಾಜ್ಯದಲ್ಲಿ ನೂತನ ಮೊಟಾರು ವಾಹನ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು.