ಭುಜ್ (ಗುಜರಾತ್): ಇಲ್ಲಿನ ವಿಶೇಷ ಪಲಾರಾ ಜೈಲಿನಲ್ಲಿ ಪಾಕಿಸ್ತಾನದ ಕೈದಿಯೊಬ್ಬ ಮೃತಪಟ್ಟಿದ್ದಾನೆ. ಮಾನಸಿಕ ಅಸ್ವಸ್ಥನಾಗಿದ್ದ ಈ ಕೈದಿಯನ್ನು ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು.
ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದು, ಪೊಲೀಸರು ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಕಳೆದ ಜನವರಿಯಲ್ಲಿ ಗಲ್ಫ್ ಆಫ್ ಕಚ್‌ನ ಅಂತಾರಾಷ್ಟ್ರೀಯ ಜಲ ಗಡಿ ಬಳಿ 1,000 ಕೋಟಿ ರೂ. ಮೌಲ್ಯದ ಗಾಂಜಾ ಜೊತೆ ಸಿಕ್ಕಿಬಿದ್ದಿದ್ದ ಐವರಲ್ಲಿ ಈತ ಕೂಡಾ ಒಬ್ಬನಾಗಿದ್ದ.
ಮೃತನನ್ನು 35 ವರ್ಷದ ಅಬ್ದುಲ್ ಕರೀಮ್ ಅಬ್ದುಲ್ಲಾ ಭಟ್ಟಿ ಎಂದು ಗುರುತಿಸಲಾಗಿದ್ದು, ಈತ ಮಿದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.