ಇಸ್ಲಾಮಬಾದ್:ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದಡಿ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ಗೆ 11 ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್(ATC) ಆದೇಶ ಹೊರಡಿಸಿದೆ.
ಮುಂಬೈ ದಾಳಿ ಸೇರಿ ಉಗ್ರ ಕೃತ್ಯಗಳಿಗೆ ಹಣಕಾಸಿನ ನೆರವು: ಹಫೀಜ್ ಸಯೀದ್ಗೆ 11 ವರ್ಷ ಕಾಲ ಜೈಲು - ಪಂಜಾಬ್ನ ಭಯೋತ್ಪಾದನಾ ನಿಗ್ರಹ ಇಲಾಖೆ
ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದಡಿ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ಗೆ 11 ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್(ATC) ಆದೇಶ ಹೊರಡಿಸಿದೆ.
ಹಫೀಜ್ ಸಯೀದ್ಗೆ ಜೈಲು ಶಿಕ್ಷೆ ಖಚಿತ
ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಅನೇಕ ಉಗ್ರ ಕೃತ್ಯಗಳಿಗೆ ಹಫೀಜ್ ಹಣಕಾಸಿನ ನೆರವು ಒದಗಿಸಿದ್ದ ಕುರಿತು ಲಾಹೋರ್ ಮತ್ತು ಗುಜ್ರಾನ್ವಾಲಾ ನಗರಗಳಲ್ಲಿ ಪಂಜಾಬ್ ಭಯೋತ್ಪಾದನಾ ನಿಗ್ರಹ ದಳವು ಪ್ರಕರಣ ದಾಖಲಿಸಿತ್ತು. 2008ರಲ್ಲಿ ನಡೆದ ಮುಂಬೈ ದಾಳಿಯಲ್ಲೂ ಈತನ ಕೈವಾಡ ಇದೆ ಎಂದು ಆರೋಪಿಸಲಾಗಿತ್ತು.
ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ಕೋರ್ಟ್, ಹಫೀಜ್ ಸಯೀದ್ಗೆ 11 ವರ್ಷ ಜೈಲು ಶಿಕ್ಷೆ ಹಾಗೂ ತಲಾ ಪ್ರಕರಣಗಳಿಗೆ 15 ಸಾವಿರ ರೂ. ದಂಡವನ್ನೂ ವಿಧಿಸಿದೆ.