ಕೋಲ್ಕತ್ತಾ: 85 ವರ್ಷದ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಮೂಲದ ನರ್ಸ್ವೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆರೈಕೆ ಮಾಡುವ ಕೈಯ್ಯಿಂದಲೇ ಹಿಂಸೆ... 85ರ ರೋಗಿ ಕಪಾಳಕ್ಕೆ ಬಾರಿಸಿದ ನರ್ಸ್ ಅರೆಸ್ಟ್ - kannadanews
ರೋಗಿಯನ್ನು ಸೇವೆ ಮಾಡುವ ನರ್ಸೇ 85 ರ ವೃದ್ಧೆಗೆ ಹೊಡೆದಿರುವ ಅಮಾನವೀಯ ಘಟನೆ ಕೊಲ್ಕೊತ್ತಾದಲ್ಲಿ ನಡೆದಿದೆ.

85ರ ವೃದ್ಧೆಗೆ ಕಪಾಳಕ್ಕೆ ಬಾರಿಸಿದ ನರ್ಸ್
ಸುಕುಮಾರಿ ಸಹ ಎಂಬ 85 ವರ್ಷದ ವೃದ್ಧೆಯೊಬ್ಬರ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮನೆಯಲ್ಲೇ ಚಿಕಿತ್ಸೆ ಕೊಡಿಸಬೇಕೆಂದು ನರ್ಸ್ವೊಬ್ಬರನ್ನು ನೇಮಿಸಿದ್ದರು. ವೃದ್ಧೆ ಇದ್ದ ಕೋಣೆಯಲ್ಲಿ ಸಿಸಿ ಕ್ಯಾಮೆರಾ ಸಹ ಅಳವಡಿಸಲಾಗಿತ್ತು.
85ರ ವೃದ್ಧೆಗೆ ಕಪಾಳಕ್ಕೆ ಬಾರಿಸಿದ ನರ್ಸ್
ಗುರುವಾರ ರಾತ್ರಿ ಅತೀವ ನೋವಿನಿಂದ ವೃದ್ಧೆಯು ಚೀರಾಡಿದಾಗ ಒಳಗೆ ಬಂದ ನರ್ಸ್ ಅವರ ಕಪಾಳಕ್ಕೆ ಬಾರಿಸಿ ಸುಮ್ಮನಿರುವಂತೆ ಗದರಿದ್ದಾಳೆ. ಸಿಸಿ ಕ್ಯಾಮೆರಾದಲ್ಲಿ ಈ ವಿಡಿಯೋ ನೋಡಿದ ಮನೆಯವರು ಕೂಡಲೇ ನರ್ಸ್ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.