ಕರ್ನಾಟಕ

karnataka

ETV Bharat / bharat

ಎಂಥಾ ಸಾಧನೆ!!: 5 ವರ್ಷ ದೇಶ ಸಂಚರಿಸಿ 1030 ಭತ್ತದ ತಳಿ ಸಂಗ್ರಹಿಸಿದ ಈ ರಾಜ್ಯದ ಅನ್ನದಾತ - 1030 traditional paddy varieties

ನಶಿಸಿಹೋದ ಭತ್ತದ ತಳಿಗಳನ್ನು ಸಂರಕ್ಷಿಸುವ ಹಾಗೂ ರೈತರ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ತಮಿಳುನಾಡಿನ ರೈತ ಪರಂಜೋತಿ ಅವರ ಕುಟುಂಬ ಐದು ವರ್ಷಗಳ ಕಾಲ ದೇಶಾದ್ಯಂತ ಸಂಚರಿಸಿ 1030 ಸಾಂಪ್ರದಾಯಿಕ ಬೆಳೆಗಳನ್ನು ಸಂಗ್ರಹಿಸಿ ಗಮನ ಸೆಳೆದಿದ್ದಾರೆ.

A Nagapattinam family breaks records by retrieving 1030 traditional paddy varieties
A Nagapattinam family breaks records by retrieving 1030 traditional paddy varieties

By

Published : Jan 23, 2020, 8:13 PM IST

ತಮಿಳುನಾಡು:ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಒಟ್ಟು 22,000ಕ್ಕೂ ಅಧಿಕ ಭತ್ತದ ತಳಿಗಳಿದ್ದವು. ಈಗ ಅವು ನಶಿಸಿಹೋಗಿವೆ. ಇಲ್ಲೊಂದು ಕುಟುಂಬ ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಕರ್ನಾಟಕ, ಛತ್ತೀಸ್​ಗಢ ಮತ್ತು ಮಣಿಪುರ ಸೇರಿದಂತೆ ಭಾರತದಾದ್ಯಂತ ಸಂಚರಿಸಿ 1,030 ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂಗ್ರಹಿಸುವ ಮೂಲಕ ಆಶ್ಚರ್ಯ ಮೂಡಿಸಿದೆ.

ನಾಗಪಟ್ಟಿಣ್ಣಂ ಜಿಲ್ಲೆಯ ವೇದಾರಾಣ್ಯಂ ಸಮೀಪದ ಕುರವಕುಪ್ಪಂ ಗ್ರಾಮದಲ್ಲಿ ವಾಸವಿರುವ ರೈತ ಪರಂಜೋತಿ ಅವರ ಕುಟುಂಬ ಈ ಸಾಧನೆ ಮಾಡಿದೆ. ಪರಂಜೋತಿ ಅವರು 50 ವರ್ಷಗಳಿಂದ ಕೃಷಿ ಜೀವನ ನಡೆಸುತ್ತಿದ್ದಾರೆ. ಅವರು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಎಲ್ಲ ತಳಿಯನ್ನೂ ಬೆಳೆದು ಮರು ಉತ್ಪಾದನೆಗೆ ಮುಂದಾಗಿದ್ದಾರೆ. ಪ್ರತಿ ಪ್ರಭೇದಕ್ಕೂ 40 ಚದರಡಿ ಜಾಗ ಬಿಡಲಾಗಿದೆ. ಪರಂಜೋತಿ ಅವರ ಹಿರಿಯ ಮಗ ಸರವಣ ಕುಮಾರನ್​ 1030 ಭತ್ತದ ತಳಿ ಸಂಗ್ರಹಿಸಿ ದೇಶದ ಗಮನ ಸೆಳೆದ ರೈತರಾಗಿದ್ದಾರೆ.

1030 ಭತ್ತದ ತಳಿ ಸಂಗ್ರಹಿಸಿದ ತಮಿಳುನಾಡಿನ ರೈತ

ಈ ಪ್ರಾಚೀನ ಭತ್ತದ ಪ್ರಭೇದಗಳನ್ನು ಉಳಿಸುವುದು ಈ ಕುಟುಂಬದ ಉದ್ದೇಶವಾಗಿದೆ. ಸರವಣ​ ಪತ್ನಿ ಶಿವರಂಜನಿ (ಪದವೀಧರೆ), ತಂದೆ ಪರಂಜೋತಿ ಮತ್ತು ಸಹೋದರ ಪಾಜಾನಿವೆಲ್​​ ದುರೈ ಅವರ ಬೆಂಬಲದೊಂದಿಗೆ ಸರವಣ​ ಈ ಸಾಧನೆ ಮಾಡಿದ್ದಾರೆ. ಇದಕ್ಕಾಗಿ ಐದು ವರ್ಷಗಳ ಕಾಲ ದೇಶ ಸುತ್ತಿದ್ದಾರೆ.

ಸರವಣ ಕುಮಾರನ್ ಮಾತನಾಡಿ, ಸಂಗ್ರಹಿಸಿರುವ ಈ ಸ್ಥಳೀಯ ಪ್ರಭೇದಗಳಿಗೆ ಹೆಚ್ಚು ರಸಗೊಬ್ಬರದ ಅವಶ್ಯಕತೆ ಇರುವುದಿಲ್ಲ. ಪ್ರವಾಹ, ಬರ ಮತ್ತು ಕೀಟಗಳ ಮುತ್ತಿಕೊಳ್ಳುವಿಕೆಯಂತಹ ನೈಸರ್ಗಿಕ ವಿಪತ್ತುಗಳನ್ನು ತಡೆದುಕೊಳ್ಳುವ ಶಕ್ತಿ ಈ ತಳಿಗಳಿಗಿವೆ ಎಂದು ಹೇಳಿದರು.

ಸರವಣ ಕುಮಾರನ್​ ಜಮೀನಿನಲ್ಲಿ ಬೆಳೆದ ಭತ್ತದ ಬೆಳೆ

ತಂಗತ್ ಟಂಪಾ, ಸೊರ್ನಾಮುಕಿ, ಸೊರ್ನಮಲ್ಲಿ, ವಾಡೆನ್ ಸಾಂಬಾ, ಪುಜುಧಿಕ್ಕರ್, ಚೆಂಗಲ್ಪಟ್ಟು ಸಿರುಮಣಿ ಸೇರಿದಂತೆ ವಿವಿಧ ತಳಿಗಳನ್ನು ಸಂಗ್ರಹಿಸಿದ್ದಾರೆ. ಸೊರ್ನವರಿ ಎಂಬ ತಳಿಯಲ್ಲಿ ಹೆಚ್ಚಿನ ಔಷಧ ಮತ್ತು ಪೌಷ್ಠಿಕಾಂಶ ಗುಣಗಳನ್ನು ಒಳಗೊಂಡಿದೆ. ಈ ತಳಿ ಉತ್ತೇಜಿಸಲು ಸರ್ಕಾರ ಮುಂದಾದರೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಅವರು ಹೇಳುತ್ತಿದ್ದಾರೆ.

ಪರಂಜೋತಿ ಅವರ ಹಿರಿಯ ಮಗ ಸರವಣ ಕುಮಾರನ್ ಅವರದ್ದು ವೈದ್ಯ ವೃತ್ತಿ. ಪ್ರಕೃತಿ ಮತ್ತು ಕೃಷಿ ಮೇಲಿನ ಪ್ರೀತಿಯಿಂದಾಗಿ ಈ ಕೆಲಸ ಮಾಡಿದ್ದಾರೆ. ಬಂಜರು ಪ್ರಭೇದಗಳಲ್ಲಿ ಭತ್ತದ ಉತ್ಪಾದನೆ ಉತ್ತಮ ಇಳುವರಿ ಸಿಗದ ಪರಿಣಾಮ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೆಚ್ಚಿನ ಇಳುವರಿಗೆ, ರೈತರ ಆತ್ಮಹತ್ಯೆ ತಡೆಯುವ ಹಾಗೂ ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಶಿಸಿಹೋದ ಸಾಂಪ್ರದಾಯಿಕ ಭತ್ತದ ಪ್ರಭೇದಗಳನ್ನು ಸಂಗ್ರಹಿಸಿದ್ದಾರೆ.

ಭತ್ತದ ಬೆಳೆ

ABOUT THE AUTHOR

...view details