ಕರ್ನಾಟಕ

karnataka

ETV Bharat / bharat

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಹೋಟೆಲ್​​​​ನಲ್ಲಿ ಪ್ರತಿ ಶಾಸಕರಿಗೆ ದಿನಕ್ಕೆ 10 ಸಾವಿರ ಖರ್ಚು!

ಇಂದು ಶಾಸಕರು ಹೊಟೇಲ್​ನಲ್ಲಿ 10ನೇ ದಿನ ಕಳೆಯುತ್ತಿದ್ದು, ಪ್ರತಿ ಶಾಸಕರಿಗೆ ದಿನಕ್ಕೆ 10,000 ಎಂದರೆ ಒಟ್ಟು 120 ಕೊಠಡಿಗಳಿಗೆ ದಿನಕ್ಕೆ 12 ಲಕ್ಷ ರೂ.ಗಿಂತಲೂ ಹೆಚ್ಚಿನ ಬಾಡಿಗೆಯನ್ನು ನೀಡಲಾಗುತ್ತಿದೆ. ಈ ಅಂಕಿ ಅಂಶದ ಪ್ರಕಾರ ಇಲ್ಲಿಯವರೆಗೆ ಒಟ್ಟು ಒಂದು ಕೋಟಿಗಿಂತಲೂ ಹೆಚ್ಚಿನ ಖರ್ಚು ಮಾಡಲಾಗಿದೆ.

hotel
hotel

By

Published : Jul 22, 2020, 8:19 AM IST

Updated : Jul 22, 2020, 8:37 AM IST

ಜೈಪುರ (ರಾಜಸ್ಥಾನ): ರಾಜಕೀಯ ಬಿಕ್ಕಟ್ಟಿನಿಂದಾಗಿ, ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ಜೈಪುರದ ಹೋಟೆಲ್​​​ ಫೇರ್​​ ಮೌಂಟ್‌ನಲ್ಲಿ ಇರಿಸಿದೆ. ಈ ಹೋಟೆಲ್​​​​ನಲ್ಲಿ ಶಾಸಕರಿಗೆ ಒಟ್ಟು 120 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ಹೋಟೆಲ್​​​ ಫೇರ್​​ಮೌಂಟ್‌ನಲ್ಲಿನ ಪ್ರತಿ ಕೋಣೆಯ ಬಾಡಿಗೆ ಸುಮಾರು 16,000 ರೂಪಾಯಿ. ಆದರೆ ಕೊರೊನಾ ಸೋಂಕಿನಿಂದಾಗಿ, ಹೋಟೆಲ್ ವ್ಯವಹಾರವು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಅದಕ್ಕಾಗಿ ಸರ್ಕಾರಕ್ಕೆ 16 ಸಾವಿರದ ಕೊಠಡಿ 8 ಸಾವಿರಕ್ಕೆ ಲಭಿಸಿದೆ.

ಫೇರ್​​​ಮೌಂಟ್ ಹೊಟೇಲ್

ಎಂಟು ಸಾವಿರ ರೂ.ನಲ್ಲಿ ಊಟ ಮತ್ತು ತಿಂಡಿಯ ವೆಚ್ಚವನ್ನೂ ಸೇರಿಸಲಾಗಿದೆ. ಅಂದರೆ, ಪ್ರತಿ ಶಾಸಕರಿಗೆ ಸುಮಾರು 10 ಸಾವಿರ ರೂಪಾಯಿಗಳ ಖರ್ಚು ಪ್ರತಿದಿನ ಬರುತ್ತಿದೆ.

ಇಂದು ಶಾಸಕರು ಹೋಟೆಲ್​​​​ನಲ್ಲಿ 10ನೇ ದಿನ ಕಳೆಯುತ್ತಿದ್ದು, ಪ್ರತಿ ಶಾಸಕರಿಗೆ ದಿನಕ್ಕೆ 10,000 ಎಂದರೆ ಒಟ್ಟು 120 ಕೊಠಡಿಗಳಿಗೆ ದಿನಕ್ಕೆ 12 ಲಕ್ಷ ರೂ.ಗಿಂತಲೂ ಹೆಚ್ಚಿನ ಬಾಡಿಗೆಯನ್ನು ನೀಡಲಾಗುತ್ತಿದೆ. ಈ ಅಂಕಿ ಅಂಶದ ಪ್ರಕಾರ ಇಲ್ಲಿಯವರೆಗೆ ಒಟ್ಟು ಒಂದು ಕೋಟಿಗಿಂತಲೂ ಹೆಚ್ಚಿನ ಹಣ ಖರ್ಚು ಮಾಡಲಾಗಿದೆ.

ಹೋಟೆಲ್​​​​​ನಲ್ಲಿರುವ ಶಾಸಕರ ಕುಟುಂಬಸ್ಥರು!

ಹೊಟೇಲ್​ನಲ್ಲಿ ವಿಶೇಷ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಸಂದರ್ಭಗಳಲ್ಲಿ ಹೊರತುಪಡಿಸಿ ಶಾಸಕರಿಗೆ ಈ ಹೋಟೆಲ್​​​​​ ನಿಂದ ಹೊರಹೋಗಲು ಅವಕಾಶವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಶಾಸಕರು ತಮ್ಮ ಮಕ್ಕಳು ಹಾಗೂ ಕುಟುಂಬದವರನ್ನು ನೆನಪಿಸಿಕೊಂಡಿದ್ದಾರೆ.

ಹೀಗಾಗಿ ಶಾಸಕರು ಬೇಕಾದಲ್ಲಿ ತಮ್ಮ ಕುಟುಂಬವನ್ನು ಹೋಟೆಲ್​​​ಗೆ ಕರೆಯಬಹುದು ಎಂದು ಪಕ್ಷ ತಿಳಿಸಿದೆ. ಇದರಿಂದಾಗಿ ಶೇ 60ರಷ್ಟು ಶಾಸಕರು ತಮ್ಮ ಕುಟುಂಬಗಳನ್ನು ಹೋಟೆಲ್​ಗೆ ಕರೆಸಿಕೊಂಡಿದ್ದಾರೆ.

Last Updated : Jul 22, 2020, 8:37 AM IST

ABOUT THE AUTHOR

...view details