ಕರ್ನಾಟಕ

karnataka

ETV Bharat / bharat

ಪದೇ ಪದೆ ಕಿತ್ತಾಡಿಕೊಳ್ಳವ ಅಪ್ಪ- ಅಮ್ಮ...12 ವಯಸ್ಸಿಗೆ ಆತ್ಮಹತ್ಯೆಗೆ ಶರಣಾದ ಬಾಲಕಿ! - ಗುಂಟೂರು ಆತ್ಮಹತ್ಯೆ ಸುದ್ದಿ

ಹಿರಿಯರು ಹೇಳೋದು ಪ್ರತಿಯೊಂದು ವಿಷಯದಲ್ಲಿ ಅರ್ಥವಿರುತ್ತೆ. ಮಕ್ಕಳ ಮುಂದೆ ಯಾವುದೇ ವಿಷಯವಾಗಲಿ, ಕಿತ್ತಾಟವಾಗಲಿ, ಜಗಳವಾಗಲಿ ಆಡಬಾರದು. ಆದ್ರೂ ಇದಕ್ಕೆ ಕಿವಿಗೊಡದ ಕೆಲವರು ಮಕ್ಕಳ ಮುಂದೆನೇ ಕಿತ್ತಾಡಿಕೊಳ್ಳುತ್ತಾರೆ. ಅದರಿಂದಾಗುವ ಅನಾಹುತ ಅವರೇ ಅನುಭವಿಸಬೇಕಾಗುತ್ತೆ. ಅದೇ ರೀತಿ, ಇಲ್ಲೊಂದು ಘಟನೆ ನಡೆದಿದ್ದು, ಅಪ್ಪ, ಅಮ್ಮನ ಪದೇ ಪದೆ ಕಿತ್ತಾಡಿಕೊಳ್ಳುತ್ತಿರುವುದರಿಂದ ಮನಸ್ತಾಪಗೊಂಡ ಬಾಲಕಿಯೊಬ್ಬಳು ತನ್ನ 12ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Jul 31, 2019, 5:02 PM IST

ಗುಂಟೂರು: ತಂದೆ-ತಾಯಿ ಇಬ್ಬರೂ ಪದೇ ಪದೆ ಕಿತ್ತಾಡಿಕೊಳ್ಳುತ್ತಿದ್ದರು. ಇದರಿಂದ ಬೇಸರಗೊಂಡ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಸತ್ತನಪಲ್ಲಿ ಗ್ರಾಮದ ನಾಗನ್ನ ಕುಟುಂಬಕ್ಕೆ ಸೇರಿದ 12 ವರ್ಷದ ಬಾಲಕಿ ತಂದೆ-ತಾಯಿ ಜಗಳಕ್ಕೆ ಬೇಸತ್ತು ಕೆಲ ದಿನಗಳ ಮಟ್ಟಿಗೆ ಸಂಬಂಧಿಕರ ಮನೆಯಲ್ಲಿದ್ದರು. ಆದ್ರೂ ಸಹ ತಂದೆ-ತಾಯಿಗೆ ಬುದ್ಧಿ ಬಂದಿಲ್ಲ. ಇದರಿಂದ ಬಾಲಕಿ ಮನಸ್ಸಿಗೆ ತುಂಬಾನೇ ನೋವಾಗಿದೆ.

ತೀವ್ರ ಮನಸ್ತಾಪಗೊಂಡ ಬಾಲಕಿ ಇದೇ ತಿಂಗಳು 28ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಲಿಯ ಔಷಧ ತಿಂದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಗುಂಟೂರು ಆಸ್ಪತ್ರೆಗೆ ದಾಖಲಿಸಿದ್ರೂ ಬಾಲಕಿ ಬದುಕಲಿಲ್ಲ. ಚಿಕಿತ್ಸೆ ಫಲಸದೇ ಇಂದು ಬಾಲಕಿ ಮೃತಪಟ್ಟಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details