ಕರ್ನಾಟಕ

karnataka

ETV Bharat / bharat

ನಾಪತ್ತೆಯಾಗಿದ್ದ ವ್ಯಕ್ತಿ... 2 ವರ್ಷದ ಬಳಿಕ ತಂದೆ-ಮಗನನ್ನು ಸೇರಿಸಿತು ಟಿಕ್​ಟಾಕ್​! - ಕಾಣೆಯಾದವನ ಪತ್ತೆಗೆ ಟಿಕ್​ಟಾಕ್ ಸಹಾಯ

ತೆಲಂಗಾಣದಲ್ಲಿ 2 ವರ್ಷದ ಹಿಂದೆ ಮೆನ ಬಿಟ್ಟು ಹೋಗಿದ್ದ ವ್ಯಕ್ತಿ ಟಿಕ್​ಟಾಕ್ ವಿಡಿಯೋ ಸಹಾಯದಿಂದ ಮತ್ತೆ ತನ್ನ ಕುಟುಂಬಸ್ಥರನ್ನು ಸೇರಿದ್ದಾನೆ.

a man who left the house was identified through tiktok
ಟಿಕ್​ಟಾಕ್​ ಸಹಾಯದಿಂದ ತಂದೆಯನ್ನು ಮನೆಗೆ ಕರೆತಂದ ಮಗ

By

Published : May 24, 2020, 11:58 AM IST

ಭದ್ರಾದ್ರಿ ಕೊತಗುಡೆಮ್(ತೆಲಂಗಾಣ):ಟಿಕ್​ಟಾಕ್ ವಿಡಿಯೋದಿಂದ ಅವಾಂತರಗಳೇ ಹೆಚ್ಚು, ಅದನ್ನ ನಿಷೇಧಿಸಬೇಕೆಂಬ ಕೂಗು ದೇಶಾದ್ಯಂತ ಕೇಳಿಬರುತ್ತಿದೆ. ಆದರೆ ತೆಲಂಗಾಣದಲ್ಲಿ 2 ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯು ಟಿಕ್​ಟಾಕ್ ವಿಡಿಯೋದಿಂದ ತನ್ನ ಕುಟುಂಬಸ್ಥರನ್ನು ಸೇರಿದ್ದಾನೆ.

ವೆಂಕಟೇಶ್ವರಲು ಅವರನ್ನು ಪತ್ತೆ ಮಾಡಲು ಸಹಾಯವಾದ ಟಿಕ್​ಟಾಕ್ ವಿಡಿಯೋ

ಭದ್ರಾದ್ರಿ ಕೊತಗುಡೆಮ್ ಜಿಲ್ಲೆಯ ನಿವಾಸಿ ವೆಂಕಟೇಶ್ವರಲು ಅವರಿಗೆ ಮೂವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ತೆರಳಿದ್ದರು. ನಂತರ ಹಿಂದಿರುಗಿ ಬರಲಿಲ್ಲ. ಈ ಬಗ್ಗೆ ಕುಟುಂಬ ಸದಸ್ಯರು ಬರ್ಗಂಪುಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದಿನಿಂದ, ವೆಂಕಟೇಶ್ವರಲುಗಾಗಿ ಹುಡುಕಾಟ ನಡೆಯುತ್ತಿತ್ತು.

ಇತ್ತೀಚೆಗೆ ಯುವಕನೊಬ್ಬ ಟಿಕ್​ಟಾಕ್ ವಿಡಿಯೋ ನೋಡುತ್ತಿರುವಾಗ ವೆಂಕಟೇಶ್ವರಲು ಅವರನ್ನು ಗಮನಿಸಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ. ಟಿಕ್​ಟಾಕ್​ ವಿಡಿಯೋ ಜಾಡು ಹಿಡಿದಾಗ ಆತ ಪಂಜಾಬ್​ನಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡುಬಂದಿದೆ.

ತಂದೆ ಇರುವ ಸ್ಥಳ ಪತ್ತೆಹಚ್ಚಿದ ಮಗ ಅಧಿಕಾರಿಗಳಿಗೆ ಮಾಹಿತಿ ನೀಡಿ ತನ್ನ ತಂದೆಯನ್ನು ಕಳುಹಿಸುವಂತೆ ಮನವಿ ಮಾಡಿದ್ದಾನೆ. ವಿಶೇಷ ಅನುಮತಿಯೊಂದಿಗೆ ಪಂಜಾಬ್‌ಗೆ ತೆರಳಿ ಪೊಲೀಸರ ಸಹಾಯದಿಂದ ತನ್ನ ತಂದೆಯನ್ನು ಯುವಕ ಗ್ರಾಮಕ್ಕೆ ಕರೆತಂದಿದ್ದಾನೆ.

ABOUT THE AUTHOR

...view details