ಬಿಹಾರ: ಲಕ್ಷಾಂತರ ರೂಪಾಯಿ ಹೊಂದಿದ್ದ ಬ್ಯಾಗ್ ಕಸಿದು ಪರಾರಿಯಾಗುವಾಗ ವ್ಯಕ್ತಿಯನ್ನ ಬೈಕ್ ಹಿಂದೆ ಎಳೆದುಕೊಂಡು ಹೋಗಿರೋ ಘಟನೆ ಬಿಹಾರದ ಹಾಜಿಪುರದಲ್ಲಿ ನಡೆದಿದೆ.
₹ 2.5 ಲಕ್ಷ ಇದ್ದ ಬ್ಯಾಗ್ ಕಸಿದು ಕಳ್ಳರು ಎಸ್ಕೇಪ್.. ಬೈಕ್‌ನ ಹಿಂದೆ ಎಳೆದೊಯ್ದ ಶಾಕಿಂಗ್ ವಿಡಿಯೋ.. ! - thieves in bike
ಬ್ಯಾಗ್‌ನಲ್ಲಿ ಲಕ್ಷಾಂತರ ರೂ. ಹಣ ಇದೆ ಅನ್ನೋದನ್ನ ಖಚಿತಪಡಿಸಿಕೊಂಡಿದ್ದರು. ಹಣದ ಬ್ಯಾಗ್‌ನ ಕಸಿಯಲು ಮುಂದಾದ ಬೈಕ್‌ನಲ್ಲಿ ಬಂದ ಕಳ್ಳರು. ಆತ ಬ್ಯಾಗ್ ಬಿಡಲೇ ಇಲ್ಲ, ಬೈಕ್‌ನ ಸಿಕ್ಕಾಪಟ್ಟೆ ಸ್ಪೀಡಾಗಿ ಓಡಿಸಿದರು. ಬೈಕ್‌ನ ಹಿಂದೆ ಆತ ಜೋತು ಬಿದ್ದಿದ್ದರೂ ರಸ್ತೆಯಲ್ಲಿ ಹಾಗೇ ಎಳೆದೊಯ್ದ ಹೃದಯ ವಿದ್ರಾವಕ ವಿಡಿಯೋ.
ರಸ್ತೆಯಲ್ಲಿ ಹೋಗುವ ವ್ಯಕ್ತಿಯ ಬ್ಯಾಗ್‌ನಲ್ಲಿ ಲಕ್ಷಾಂತರ ರೂಪಾಯಿ ಇದೆ ಅಂತಾ ಬೈಕ್‌ನಲ್ಲಿದ್ದ ಕಳ್ಳರಿಗೆ ಅದ್ಹೇಗೋ ಗೊತ್ತಾಗಿತ್ತು. 2.5 ಲಕ್ಷ ರೂ. ಬ್ಯಾಗ್‌ನ ಹಿಡ್ಕೊಂಡು ಆ ವ್ಯಕ್ತಿ ರಸ್ತೆಯಲ್ಲಿ ಹೋಗ್ತಾಯಿದ್ದ. ಬೈಕ್‌ನಲ್ಲಿದ್ದ ಕಳ್ಳರು ಬ್ಯಾಗ್‌ನ ಕಸಿಯಲೆತ್ನಿಸಿದ್ದಾರೆ. ಆದರೆ, ಮೊದಲಿಗೆ ತನ್ನ ಬ್ಯಾಗ್‌ನ ಆ ವ್ಯಕ್ತಿ ಕೈಬಿಟ್ಟಿಲ್ಲ. ಆದರೆ, ಕಳ್ಳರು ಬ್ಯಾಗ್‌ನ ಹಿಡಿದು ಎಳೆದಿದ್ದಾರೆ. ಬೈಕ್‌ನ ಜೋರಾಗಿ ಓಡಿಸಿದ್ದರಿಂದಾಗಿ ಬ್ಯಾಗ್ ಬಿಡದ ವ್ಯಕ್ತಿಯನ್ನ ಹಾಗೇ ಎಳೆದೊಯ್ದಿದ್ದಾರೆ. ಬೈಕ್ ಹಿಂದೆ ರಸ್ತೆಯಲ್ಲಿ ಆ ವ್ಯಕ್ತಿಯನ್ನ ಎಳೆದೊಯ್ದಿರೋ ದೃಶ್ಯ ಹೃದಯ ವಿದ್ರಾವಕವಾಗಿದೆ. ಕೊನೆಗೂ ಬ್ಯಾಗ್‌ನ ಬೈಕ್‌ನಲ್ಲಿ ಬಂದ್ ಕಳ್ಳರು ಕಸಿದು ಪರಾರಿಯಾಗಿದ್ದಾರೆ. 10 ಸೆಕೆಂಡ್‌ನ ಈ ವಿಡಿಯೋ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಾಜಿಪುರದ ಇದೇ ಏರಿಯಾದಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಮೂವರು ಕಳ್ಳರು ಬೈಕ್ ಮೇಲಿಂದಲೇ 3 ಲಕ್ಷ ರೂ. ಹೊಂದಿದ್ದ ವ್ಯಕ್ತಿಯ ಬ್ಯಾಗ್ ಕಸಿದು ಪರಾರಿಯಾಗಿದ್ದರು. ಈಗ 2.5 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.