ಅಹಮದಾಬಾದ್(ಗುಜರಾತ್): ವರ್ಷದ ಕೊನೆಯ ದಿನ, ಹಣ ವಿನಿಮಯಕ್ಕೆ ಸಂಬಂಧಿಸಿದ ವಿಷಯವೊಂದರಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದ ಘಟನೆ ಗುಜರಾತ್ನಲ್ಲಿ ನಡೆದಿದೆ.
ಹಣಕಾಸು ವಿಚಾರಕ್ಕೆ ಗುಂಡು ಹಾರಿಸಿ ವ್ಯಕ್ತಿಯೊಬ್ಬನ ಹತ್ಯೆ: ಇಬ್ಬರು ಆರೋಪಿಗಳ ಬಂಧನ - ಅಹಮದಾಬಾದ್ನಲ್ಲಿ ವ್ಯಕ್ತಿಯೋರ್ವನ ಹತ್ಯೆ
ಅಹಮದಾಬಾದ್ ನಗರದಲ್ಲಿ ಹಣಕಾಸು ವಿಚಾರಕ್ಕೆ ವ್ಯಕ್ತಿಯೊಬ್ಬನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಣಕಾಸು ವಿಚಾರಕ್ಕೆ ಗುಂಡು ಹಾರಿಸಿ ವ್ಯಕ್ತಿಯೋರ್ವನ ಹತ್ಯೆ
ಜಸ್ವಂತ್ ಸಿಂಗ್ ರಜಪೂತ್ ಮೃತ ದುರ್ದೈವಿ,ಅರ್ಪನ್ ಪಾಂಡೆ ಮತ್ತು ಸುಶೀಲ್ ಸಿಂಗ್ ಠಾಕೂರ್ ಅವರು ನಗರದ ವಾಸ್ಟ್ರಲ್‌ನ ರಾಧೆ ಚೇಂಬರ್ಸ್‌ನಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಸಾರ್ವಜನಿಕವಾಗಿ ಆರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಿದ ನಂತರ, ಹಣವನ್ನು ತೆಗೆದುಕೊಳ್ಳುವಾಗ ವ್ಯಕ್ತಿಯನ್ನು ಕೊಲ್ಲಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು. ಹತ್ಯೆಗೆ ಬಳಸಿದ ಪರವಾನಗಿ ಹೊಂದಿದ್ದ ರಿವಾಲ್ವರ್ ವಶಕ್ಕೆ ಪಡೆದುಕೊಂಡಿದ್ದಾರೆ.