ಹೈದರಾಬಾದ್: ಪತ್ನಿ ಮಕ್ಕಳೊಡನೆ ತವರು ಮನೆಗೆ ಹೋಗಿದ್ದಾಳೆ. ಇದೇ ಖುಷಿಯಲ್ಲಿ ವ್ಯಕ್ತಿಯೊಬ್ಬ ಮನೆಗೆ ಮಹಿಳೆಯೊಬ್ಬಳನ್ನು ಕರೆದುಕೊಂಡು ಬಂದಿದ್ದಾನೆ. ಇಬ್ಬರು ಕುಡಿದು ಮನೆಯಲ್ಲಿ ಮಜಾ ಮಾಡಿದ್ದಾರೆ. ಆದ್ರೆ ಏನಾಯ್ತೋ ಏನೋ ಮಹಿಳೆಯನ್ನು ಕೊಂದು ವ್ಯಕ್ತಿ ಪರಾರಿಯಾಗಿದ್ದಾನೆ. ಈ ಘಟನೆ ಮುತ್ತಿನ ನಗರಿ ಹೈದರಾಬಾದ್ನ ಉಪ್ಪಲ್ನಲ್ಲಿ ನಡೆದಿದೆ.
ಏನಿದು ಪ್ರಕರಣ?
ಇನ್ನು ಮನೆಯಲ್ಲಿ ಇಬ್ಬರು ಸೇರಿ ಮದ್ಯೆ ಸೇವನೆ ಮಾಡಿ ಮಧ್ಯೆ ರಾತ್ರಿಯವರೆಗೆ ಎಂಜಾಯ್ ಮಾಡಿದ್ದಾರೆ. ಇಲ್ಲಿನ ಚಿಲುಕಾನಗರದ ನಿವಾಸಿ ಅಂಜಯ್ಯ ಚಾಲಕ ವೃತ್ತಿ ಮಾಡುತ್ತಿದ್ದಾನೆ. ಭಾನುವಾರದಂದು ಅಂಜಯ್ಯನ ಪತ್ನಿ ಮಕ್ಕಳೊಡನೆ ತವರು ಮನೆಗೆ ಹೋಗಿದ್ದಾರೆ. ಹೆಂಡ್ತಿ ಊರಿಗೆ ಹೋದ ಖುಷಿಯಲ್ಲಿ ಅಂಜಯ್ಯ ಮಹಿಳೆಯೊಬ್ಬಳನ್ನು ಮನೆಗೆ ಕರೆ ತಂದಿದ್ದಾನೆ.