ಪಶ್ಚಿಮ ಗೋದಾವರಿ:ಬುದ್ದಿ ಸ್ಥಿಮಿತದಲ್ಲಿರದ ಮಗನೊಬ್ಬ ತನ್ನ ಹೆತ್ತ ತಂದೆ - ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ಕಡಿಯದ್ದ ಗ್ರಾಮದಲ್ಲಿ ನಡೆದಿದೆ.
ತಂದೆ - ತಾಯಿಯನ್ನೇ ಕೊಲೆ ಮಾಡಿದ ಮಗ... ಅಕ್ಕ - ಅಣ್ಣನಿಂದ ತಪ್ಪಿಸಿಕೊಂಡ ತಮ್ಮ! - ಪಶ್ಚಿಮ ಗೋದಾವರಿ ಪೋಷಕರ ಕೊಲೆ ಸುದ್ದಿ
ತಂದೆ- ತಾಯಿಯನ್ನು ಕೊಲೆ ಮಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಆತನ ಅಕ್ಕ-ತಮ್ಮ ಹಿಡಿದು ಪೊಲೀಸರಿಗೊಪ್ಪಿಸುವಲ್ಲಿ ವಿಫಲರಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಜಾಲವರ್ತಿ ರಮೇಶ್ಗೆ ಮದುವೆಯಾಗಿದ್ದು, ಮತಿ ಸ್ಥಿತಿ ಸರಿಯಾಗಿ ಇಲ್ಲದ ಕಾರಣ ಆತನ ಹೆಂಡ್ತಿ ಮನೆ ಬಿಟ್ಟು ತವರು ಮನೆ ಸೇರಿದ್ದರು. ಇಂದು ರಮೇಶ್ ತನ್ನ ಹೆತ್ತ ತಂದೆ-ತಾಯಿಯನ್ನು ರಾಡ್ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ. ಬಳಿಕ ರಮೇಶ್ ಅಕ್ಕ ಮತ್ತು ಅಣ್ಣನಿಗೆ ಎದುರಾಗಿದ್ದು, ಅವರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದಾನೆ. ಈ ಸುದ್ದಿ ತಿಳಿದ ಪೊಲೀಸ್ ಅಧಿಕಾರಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಈ ಘಟನೆ ಕುರಿತು ತಾಡೆಪಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.