ಕರ್ನಾಟಕ

karnataka

ETV Bharat / bharat

ಮಗಳು ಸೇರಿ ಮೂವರನ್ನು ಬರ್ಬರವಾಗಿ ಕೊಂದ ವ್ಯಕ್ತಿ! ಕಾರಣ? - murder of three people

ಅಣ್ಣನ ಮಗಳು ಪ್ರೇಮವಿವಾಹ ಆಗಿದ್ದಕ್ಕೆ ಕೋಪಗೊಂಡ ವ್ಯಕ್ತಿ, ಅಣ್ಣ, ಅಣ್ಣನ ಮಗಳು ಹಾಗೂ ತನ್ನ ಮಗಳನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ದೋಮಕಾಂಡ ಶಿವಾರುನಲ್ಲಿ ನಡೆದಿದೆ.

ಮಗಳನ್ನು ಸೇರಿ ಮೂವರ ಹತ್ಯೆ

By

Published : Oct 13, 2019, 10:07 AM IST

Updated : Oct 13, 2019, 12:29 PM IST

ಹೈದ್ರಾಬಾದ್:ಕುಟುಂಬದಲ್ಲಿ ಪ್ರೇಮವಿವಾಹ ನಡೆದಿದ್ದರಿಂದ ಕೋಪಗೊಂಡ ವ್ಯಕ್ತಿಯೊಬ್ಬ ಮನೆಯಲ್ಲಿ ರಕ್ತದ ಕೋಡಿಯನ್ನೇ ಹರಿಸಿರುವ ಭೀಕರ ಘಟನೆಯೊಂದು ತೆಲಂಗಾಣ ರಾಜ್ಯದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಮತ್ತೊಂದು ಬಾರಿ ತಮ್ಮ ಕುಟುಂಬದಲ್ಲಿ ಪ್ರೇಮವಿವಾಹ ನಡೆದೀತು ಎಂದು ಪೂರ್ವಾಗ್ರಹಪೀಡಿನಾದ ವ್ಯಕ್ತಿ ತನ್ನ ಮಗಳು, ಸಹೋದರ ಮತ್ತು ಆತನ ಮಗಳನ್ನು ಬರ್ಬರವಾಗಿ ಕೊಂದಿದ್ದಾನೆ.

ಕಾಮರೆಡ್ಡಿ ಜಿಲ್ಲೆಯ ದೋಮಕಾಂಡ ಶಿವಾರುನ ನಿವಾಸಿ ಬಾಲಯ್ಯ (45), ಹಿರಿಯ ಮಗಳು ದೀಪಾ ಮತ್ತು ಆರೋಪಿಯ ಮಗಳು ಕೊಲೆಯಾದವರು. ದೀಪಾ ಅದೇ ಗ್ರಾಮದ ಯುವಕನನ್ನು ಪ್ರೇಮಿಸಿ ವಿವಾಹವಾಗಿದ್ದಳು.

ಮಗಳನ್ನು ಸೇರಿ ಮೂವರ ಹತ್ಯೆ

ಆಕೆಯ ಚಿಕ್ಕಪ್ಪ ರವಿಗೆ ಈ ಪ್ರೇಮ ವಿವಾಹ ಇಷ್ಟವಿರಲಿಲ್ಲ. ಇದೆಲ್ಲವನ್ನು ಎದುರಿಸಿದ ದೀಪಾ ವಿವಾಹವಾಗಿದ್ದಳು ಎನ್ನಲಾಗ್ತಿದೆ. ಇದನ್ನು ಅರಗಿಸಿಕೊಳ್ಳದ ರವಿ ತನ್ನ ಅಣ್ಣನ ಮೇಲೆ ಕೋಪಗೊಂಡಿದ್ದ. ಬಳಿಕ ಇದೇ ರೀತಿ ತನ್ನ ಮಕ್ಕಳು ಕೂಡ ಮದುವೆಯಾಗುತ್ತಾರೆ ಎಂಬ ತಪ್ಪು ಕಲ್ಪನೆಯಿಂದ ಅಣ್ಣ, ಅಣ್ಣನ ಮಗಳು ಹಾಗೂ ತನ್ನ ಮಗಳನ್ನು ಕೊಲೆಗೈದಿದ್ದಾನೆ.

ಕೊಲೆ ಮಾಡಲು ಮೊದಲೇ ಸಂಚು ರೂಪಿಸಿದ್ದ ರವಿ, ಶನಿವಾರ ಮೂವರನ್ನು ದೇವಸ್ಥಾನಕ್ಕೆ ಕರೆದೊಯ್ದಿದ್ದ. ಬಳಿಕ ಅವರಿಗೆ ದೇವಸ್ಥಾನದ ಪ್ರಸಾದಲ್ಲಿ ವಿಷ ಬೆರಸಿ ಕೊಟ್ಟಿದ್ದಾನೆ. ಇದನ್ನು ತಿಂದು ಅವರು ಅಸ್ವಸ್ಥರಾಗುತ್ತಿದ್ದಂತೆ ಬ್ಲೇಡ್​​ನಿಂದ ಕತ್ತು ಕೊಯ್ದು ಕೊಲೆ ಮಾಡಿ, ವಿಕೃತಿ ಮೆರೆದಿದ್ದಾನೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Last Updated : Oct 13, 2019, 12:29 PM IST

ABOUT THE AUTHOR

...view details