ಹೈದರಾಬಾದ್: ಪಬ್ಜಿ ಗೇಮ್ ಮೂಲಕ ಪರಿಚಯವಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಯುವಕನೋರ್ವ ಮಾನಸಿಕ ಕಿರುಕುಳ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪಬ್ಜಿ ಗೇಮ್ ಮೂಲಕ ಪರಿಚಯ... ಅಪ್ರಾಪ್ತೆಗೆ ಮಾನಸಿಕ ಕಿರುಕುಳ ನೀಡಿದ್ದ ಯುವಕ ಅಂದರ್ - ಅಪ್ರಾಪ್ತೆಗೆ ಕಿರುಕುಳ ನೀಡಿದ ಯುವಕ
ಪಬ್ಜಿ ಗೇಮ್ ಮೂಲಕ ಪರಿಚಯವಾಗಿದ್ದ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸಲ್ಮಾನ್ ಖಾನ್ ಎಂಬ ಯುವಕ ಟೊಲಿಚೌಕಿ ಮೂಲದ 14ರ ಪ್ರಾಯದ ಬಾಲಕಿಯನ್ನ ಪಬ್ಜಿ ಆನ್ಲೈನ್ ಗೇಮ್ ಮೂಲಕ ಪರಿಚಯ ಮಾಡಿಕೊಂಡಿದ್ದ. ಗೇಮ್ ಆಡುತ್ತ ಇಬ್ಬರು ಸ್ನೇಹಿತರಾಗಿ ಪರಸ್ಪರ ಮೊಬೈಲ್ ನಂಬರ್ ಪಡೆದುಕೊಂಡು ಮಾತನಾಡುತ್ತಿದ್ದರು.
ವಾಟ್ಸ್ಆ್ಯಪ್ ಮೂಲಕ ಬಾಲಕಿ ತನ್ನ ಫೋಟೊಗಳನ್ನ ನೀಡಿದ್ದಳು. ಅವುಗಳನ್ನ ಇಟ್ಟುಕೊಂಡು ಯುವಕ ಬಾಲಕಿಯನ್ನ ಬ್ಲಾಕ್ಮೇಲ್ ಮಾಡಿ ಮಂಚಕ್ಕೆ ಕರೆದಿದ್ದ. ತುಂಬಾ ದಿನಗಳಿಂದ ಮಾನಸಿಕ ಕಿರುಕುಳ ಅನುಭವಿಸಿದ ಯುವತಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಆಕೆಯ ಪೋಷಕರು ಸೈಬರ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.