ಗುಂಟೂರು:ಅರ್ಧ ಕೋಟಿ ವರದಕ್ಷಿಣೆ ಜೊತೆಗೆ ಕೋಟಿ ಕನಸುಗಳು ಹೊತ್ತುಕೊಂಡು ಮದುವೆ ಮಾಡಿಕೊಂಡ ಯುವತಿಗೆ ಈಗ ಬರೀ ಕಣ್ಣೀರು ಮಾತ್ರ ಉಳಿದಿದೆ.
ಹೌದು, ಗುಂಟೂರು ನಿವಾಸಿಯಾದ ಯುವತಿಗೆ ಇಲ್ಲಿನ ಆರ್ಟಿಸಿ ಕಾಲೋನಿಯ ಎನ್ಆರ್ಐ ಜೊತೆ 50 ಲಕ್ಷ, 55 ಗ್ರಾಂ ಬಂಗಾರ ಜೊತೆ 15 ಲಕ್ಷ ಖರ್ಚು ಮಾಡಿ ಮಾರ್ಚ್ 18ರಂದು ಭರ್ಜರಿ ಮದುವೆ ಮಾಡಿಕೊಡಲಾಗಿತ್ತು. ಮೊದಲನೇ ರಾತ್ರಿಯಲ್ಲೇ ನನಗೆ ಆರೋಗ್ಯ ಸರಿಯಿಲ್ಲ ಎಂದು ಪತ್ನಿಗೆ ಹೇಳಿ ಪತಿ ಹೊರ ನಡೆದಿದ್ದನು. ಬಳಿಕವೂ ಪತ್ನಿ ಜೊತೆಯಲ್ಲಿರಲು ನಿರಾಕರಿಸಿದ್ದಾನೆ. ಇದರಿಂದ ಅನುಮಾನಗೊಂಡ ಪತ್ನಿ ಗಂಡನಿಗೆ ಕೇಳಿದಾಗ ಅಸಲಿಯತ್ತು ಹೊರ ಬಿದ್ದಿದೆ.
‘ಮೂವರು ಎಂಜಾಯ್ ಮಾಡೋಣಾ ಬಾ’
ಕೋಪಗೊಂಡು ಪತ್ನಿ ಗಂಡನನ್ನು ವಿಚಾರಿಸಿದಾಗ ‘ನನಗೆ ಹೆಣ್ಣು ಅಂದ್ರೆ ಇಷ್ಟವಿಲ್ಲ. ಅಮೆರಿಕದಲ್ಲಿ ನನಗೊಬ್ಬ ಬಾಯ್ಫ್ರೆಂಡ್ ಇದ್ದಾನೆ. ಆತನಿಗಾಗಿಯೇ ನಾನು ಮದುವೆ ಮಾಡಿಕೊಂಡಿದ್ದೇನೆ. ಅಮೆರಿಕಕ್ಕೆ ತೆರಳಿದ ನಂತರ ಆತನಿಗೆ ನಿನ್ನನ್ನು ಒಪ್ಪಿಸುವೆ. ನೀನು ಆತನೊಂದಿಗೆ ಸಂಸಾರ ಮಾಡುಬೇಕು. ನಾನು ಸಹ ಆತನೊಂದಿಗೆ ಸುಖಪಡುತ್ತಿದ್ದೇನೆ. ಮೂವರು ಸೇರಿ ಎಂಜಾಯ್ ಮಾಡೋಣ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಹೆಂಡ್ತಿ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಾಳೆ.