ಅನಂತಪುರ/ಆಂಧ್ರಪ್ರದೇಶ:ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಬೆನ್ನ ಮೇಲೆ ಹೊತ್ತು 2 ಕಿ.ಮೀ ಸಾಗಿ ಆಸ್ಪತ್ರೆ ತಲುಪಿರುವ ಘಟನೆ ಆಂಧ್ರಪ್ರದೇಶದ ಅನಂತಪುರ್ ಜಿಲ್ಲೆಯ ಕಲ್ಯಾಣದುರ್ಗಂ ಬಳಿ ನಡೆದಿದೆ.
ಜ್ವರಪೀಡಿತ ತಾಯಿಯನ್ನು 2 ಕಿ.ಮೀ ಬೆನ್ನ ಮೇಲೆ ಹೊತ್ತು ಆಸ್ಪತ್ರೆ ತಲುಪಿದ ಮಗ!! - ಆಸ್ಪತ್ರೆ
ಕಲ್ಯಾಣದುರ್ಗಂ ಬಳಿಯ ದುರಧಗುಂಟ ಗ್ರಾಮದ ನಿವಾಸಿ ರಾಮಕ್ಕ ಜ್ವರದಿಂದ ಬಳಲುತ್ತಿದ್ರು. ಆಸ್ಪತ್ರೆಗೆ ತೆರಳು ತನ್ನ ಮಗನ ಜೊತೆ ಆಟೋದಲ್ಲಿ ಗ್ರಾಮದಿಂದ ಕಲ್ಯಾಣದುರ್ಗಂ ವರೆಗೂ ಬಂದಿದ್ದಾರೆ. ಆದರೆ, ಲಾಕ್ಡೌನ್ ಕಾರಣ ಆಟೋ ಚಾಲಕ ಊರಿನ ಹೊರವಲಯದಲ್ಲಿ ನಿಲ್ಲಿಸಿದ್ದಾನೆ.

ಅಮ್ಮನನ್ನು 2 ಕಿ.ಮೀ. ಬೆನ್ನ ಮೇಲೆ ಹೊತ್ತು ಆಸ್ಪತ್ರೆ ತಲುಪಿದ ಮಗ
ಅಮ್ಮನನ್ನು 2 ಕಿ.ಮೀ ಬೆನ್ನ ಮೇಲೆ ಹೊತ್ತು ಆಸ್ಪತ್ರೆ ತಲುಪಿದ ಮಗ..
ಕಲ್ಯಾಣದುರ್ಗಂ ಬಳಿಯ ದುರಧಗುಂಟ ಗ್ರಾಮದ ನಿವಾಸಿ ರಾಮಕ್ಕ ಜ್ವರದಿಂದ ಬಳಲುತ್ತಿದ್ರು. ಆಸ್ಪತ್ರೆಗೆ ತೆರಳು ತನ್ನ ಮಗನ ಜೊತೆ ಆಟೋದಲ್ಲಿ ಗ್ರಾಮದಿಂದ ಕಲ್ಯಾಣದುರ್ಗಂ ವರೆಗೂ ಬಂದಿದ್ದಾರೆ. ಆದರೆ, ಲಾಕ್ಡೌನ್ ಕಾರಣ ಆಟೋ ಚಾಲಕ ಊರಿನ ಹೊರವಲಯದಲ್ಲಿ ನಿಲ್ಲಿಸಿದ್ದಾನೆ.
ನಂತರ ಅವರ ಮಗ ತಾಯಿಯನ್ನು ಹೊತ್ತುಕೊಂಡು ಸ್ಥಳೀಯ ಸುಮಾರು 5 ರಿಂದ 6 ಆಸ್ಪತ್ರೆಗಳಿಗೆ ಅಲೆದಿದ್ದಾರೆ. ಆದರೆ, ಕೊರೊನಾ ಲಾಕ್ಡೌನ್ ಕಾರಣ ಯಾವುದೇ ಆಸ್ಪತ್ರೆಯಲ್ಲಿ ಡಾಕ್ಟರ್ಗಳು ಸಿಕ್ಕಿಲ್ಲ. ನಂತರ ತನ್ನ ತಾಯಿಯನ್ನು ಬೆನ್ನ ಮೇಲೆ ಹೊತ್ತುಕೊಂಡೇ ಸರ್ಕಾರಿ ಆಸ್ಪತ್ರೆ ತಲುಪಿ ತಾಯಿಯನ್ನು ದಾಖಲಿಸಿದ್ದಾರೆ.