ಕರ್ನಾಟಕ

karnataka

ETV Bharat / bharat

ಪೊಲೀಸಪ್ಪನ ಕಿರುಬೆರಳನ್ನೇ ಬಾಯಿಯಿಂದ ಕಚ್ಚಿ ಕತ್ತರಿಸಿದ ಆಗಂತುಕ! - ಖಮ್ಮಂ ಸುದ್ದಿ

ದಿವ್ಯಾಂಗ ವ್ಯಕ್ತಿಯೊಬ್ಬ ಪೊಲೀಸ್​ ಠಾಣೆಗೆ ತೆರಳಿ ಪೇದೆಯೊಬ್ಬರ ಕಿರುಬೆರಳನ್ನು ಬಾಯಿಯಿಂದ ಕಚ್ಚಿ ಕತ್ತರಿಸಿ ಆತಂಕ ಸೃಷ್ಟಿಸಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ಪೊಲೀಸಪ್ಪನ ಕಿರುಬೆರಳನ್ನೇ ಬಾಯಿಯಿಂದ ಕಚ್ಚಿ ಕತ್ತರಿಸಿದ ಆಗಂತುಕ

By

Published : Oct 23, 2019, 10:20 AM IST

ಖಮ್ಮಂ(ತೆಲಂಗಾಣ):ಪ್ರಕರಣ ದಾಖಲಿಸುವ ನೆಪದಲ್ಲಿ ಮಧ್ಯರಾತ್ರಿ ಪೊಲೀಸ್​ ಠಾಣೆಗೆ ತೆರಳಿದ ದಿವ್ಯಾಂಗ ವ್ಯಕ್ತಿಯೊಬ್ಬ ಪೇದೆಯೊಬ್ಬರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿರುವ ಘಟನೆ ಖಮ್ಮಂ ನಗರ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಇಲ್ಲಿನ ನಾಯಾಬ್ರಾಹ್ಮಣ ನಗರದ ಡುಂಗ್ರೋತು ಮಸ್ತಾನ್​ (ದಿವ್ಯಾಂಗ ವ್ಯಕ್ತಿ) ಮತ್ತು ಇನ್ನಿಬ್ಬರು ಸೋಮವಾರ ಮಧ್ಯರಾತ್ರಿ ಪೊಲೀಸ್​ ಠಾಣೆಗೆ ತೆರಳಿದ್ದರು. ಪೇದೆ ಮನ್ಸೂರ್ ಅಲಿಗೆ ವಿವರಣೆ ನೀಡುತ್ತಿದ್ದ ಕ್ರಮದಲ್ಲಿ ಮಸ್ತಾನ್​ ಆತಂಕ ಸೃಷ್ಟಿಸಿದ್ದಾನೆ.

ಏಕಾಏಕಿ ಪೊಲೀಸ್​ ಪೇದೆ ಮನ್ಸೂರ್ ಅಲಿ ಮೇಲೆ ಮಸ್ತಾನ್​ ಅಟ್ಯಾಕ್‌ ಮಾಡಿ ತೊಡೆಯನ್ನು ಕಚ್ಚಿದ್ದಾನೆ. ಬಳಿಕ ಪೇದೆಯ ಕಿರುಬೆರಳನ್ನೇ ಬಾಯಿಯಿಂದ ಕಚ್ಚಿ ಕತ್ತರಿಸಿದ! ಇದಾದ ಮೇಲೆ, ಮಸ್ತಾನ್​ ಮತ್ತು ಆತನೊಂದಿಗೆ ಬಂದಿದ್ದ ಇಬ್ಬರೂ ಠಾಣೆಯಿಂದ ಕಾಲ್ಕಿತ್ತಿದ್ದರು. ಪೊಲೀಸರು ಮಸ್ತಾನ್​ನನ್ನು ಬಂಧಿಸಿ ವಿಚಾರಿಸುತ್ತಿರುವಾಗ ಎಎಸ್​ಐ ನಾಗೇಶ್ವರ ರಾವ್‌ ಮೇಲೆ ಮತ್ತೆ ದಾಳಿ ಮಾಡಿದ್ದಾನೆ.

ಮಸ್ತಾನ್​ ಕೆಲ ವರ್ಷದಿಂದಲೂ ಹೀಗೆ ವ್ಯವಹರಿಸುತ್ತಾ ಪೊಲೀಸ್​ ಠಾಣೆಯಲ್ಲಿ, ಹೆದ್ದಾರಿಯಲ್ಲಿ ಜಗಳವಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ರೈಲು ಹಳಿಯ ಮೇಲೆ ತಾನೇ ತನ್ನ ಎರಡು ಕಾಲುಗಳನ್ನಿಟ್ಟು ಕಳೆದುಕೊಂಡಿದ್ದಾನೆ. ರಾಜ್ಯದ ಕೆಲ ಪೊಲೀಸ್​ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣವೂ ದಾಖಲಾಗಿವೆ.

ಪೊಲೀಸಪ್ಪನ ಕೈ ಬೆರಳು ಕಚ್ಚಿ ಕತ್ತರಿಸಿರುವ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details