ಚಿಕ್ಕೋಡಿ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಬಳಕೆ ಮಾಡುವಂತೆ ಸರ್ಕಾರ ಸೂಚನೆ ನೀಡಿದ್ದು, ಮಹಾರಾಷ್ಟ್ರದಲ್ಲಿ ಬೆಳ್ಳಿ ಮಾಸ್ಕ್ಗಳನ್ನು ತಯಾರು ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಸಿದ್ಧವಾಗಿವೆ ಬೆಳ್ಳಿಯ ಮಾಸ್ಕ್ಗಳು! - ಮಹಾರಾಷ್ಟ್ರದಲ್ಲಿ ಬೆಳ್ಳಿ ಮಾಸ್ಕ್ ತಯಾರು
ಕೋವಿಡ್-19 ತಡೆಯಲು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಮಹಾರಾಷ್ಟ್ರದ ಆಭರಣಗಳ ವ್ಯಾಪಾರಿಯೊಬ್ಬರು ಬೆಳ್ಳಿ ಮಾಸ್ಕ್ಗಳನ್ನು ತಯಾರಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸಿದ್ಧವಾಗಿವೆ ಬೆಳ್ಳಿ ಮಾಸ್ಕ್ಗಳು
ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯವಾಗಿರುವುದರಿಂದ ತರಹೇವಾರಿ ಮಾಸ್ಕ್ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಈ ಮಧ್ಯೆ ಮಹಾರಾಷ್ಟ್ರದಲ್ಲಿ ಬೆಳ್ಳಿಯ ಮಾಸ್ಕ್ಗಳನ್ನು ತಯಾರಿಸಲಾಗಿದೆ.
ಮಹರಾಷ್ಟ್ರದ ಕೊಲ್ಲಾಪುರ ನಗರದಲ್ಲಿ ಬೆಳ್ಳಿ ಮಾಸ್ಕ್ ಸಿದ್ಧವಾಗಿದ್ದು, ಆಭರಣಗಳ ವ್ಯಾಪಾರಿ ಸಂದೀಪ ಸಾಂಗವಕರ ಈ ಮಸ್ಕ್ಗಳನ್ನು ತಯಾರಿಸಿದ್ದಾರೆ. ವಿಶೇಷವಾಗಿ ಕೊರೊನಾ ಭೀತಿಯಲ್ಲಿ ಮದುವೆ ಆಗುತ್ತಿರುವ ನೂತನ ವಧು-ವರರಿಗಾಗಿ ಇವುಗಳನ್ನು ನಿರ್ಮಿಸಲಾಗಿದೆ. ಮಹರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ ವಿಭಿನ್ನವಾದ ಬೆಳ್ಳಿ ಮಾಸ್ಕ್ಗಳು ಗಮನ ಸೆಳೆಯುತ್ತಿವೆ.