ಕರ್ನಾಟಕ

karnataka

ETV Bharat / bharat

ಕಳ್ಕೊಂಡ್ ಮೇಲೆ ಹೆತ್ತವರು ಕಣ್ಣೀರಿಟ್ಟರೇನು? - ಕೋರಿಯರ್​ ಬಾಯ್​​ ಲವ್​ ಸ್ಟೋರಿ ದುರಂತ ಅಂತ್ಯ! - ​ ಲವ್​ ಸ್ಟೋರಿ

ಮದುವೆ ಮಾಡಿಕೊಂಡು ಜೀವನ ಸಾಗಿಸಬೇಕೆಂದ ಲವ್​ಬರ್ಡ್ಸ್​ಗೆ ಹಿರಿಯರೇ ವಿಲನಾದ್ರು.. ಪ್ರಿಯತಮೆ ಸಾವು ಪ್ರೇಮಿಗೆ ಸಹಿಸಿಕೊಳ್ಳೋದಕ್ಕಾಗಲೇ ಇಲ್ಲ. ಅವರ ಪ್ರೀತಿ ಒಪ್ಪದ ಹಿರಿಯರು ಮಕ್ಕಳನ್ನು ಕಳೆದುಕೊಂಡು ಈಗ ಕಣ್ಣೀರಿಡುತ್ತಿದ್ದಾರೆ.

ವಿಷಾದದಲ್ಲಿ ಅಂತ್ಯವಾಯ್ತು

By

Published : May 31, 2019, 1:01 PM IST

Updated : May 31, 2019, 1:47 PM IST

ಹೈದರಾಬಾದ್​: ಆತ ಕೊರಿಯರ್​ ಬಾಯ್​.. ಹೈದರಾಬಾದ್​ನ ತನ್ನ ಸೋದರಮಾವನಎದುರುಮನೆಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಆದರೆ, ಇವರ ಪ್ರೀತಿಗೆ ಹಿರಿಯರು ನೋ ಎಂದಿದ್ದಾರೆ. ಇದರಿಂದ ಆ ಜೋಡಿಹಕ್ಕಿ ಜೀವ ಕಳ್ಕೊಂಡಿವೆ. ಹಿರಿಯರು ಮಾತ್ರ ಈಗ ಮಕ್ಕಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.

ತೆಲಂಗಾಣದ ಮೇದಕ್ ಜಿಲ್ಲೆಯ ನಿವಾಸಿ ರಮೇಶ್‌ ಎಂಬ (25) ಯುವಕ ಹೈದರಾಬಾದ್​ನಲ್ಲಿ ಕೋರಿಯರ್​ ಬಾಯ್​ ಆಗಿ ಕೆಲಸ ಮಾಡುತ್ತಿದ್ದ. ಫತೇನಗರ್​ದಲ್ಲಿರುವ ಸೋದರಮಾವನ ಮನೆಗೆ ಆಗಾಗ ಹೋಗಿ ಬರುತ್ತಿದ್ದ. ಈ ವೇಳೆ ಎದುರು ಮನೆಯಲ್ಲಿರುವ ರಿಷಿತಾ (18) ಎಂಬ ಯುವತಿಯ ಪರಿಚಯವಾಗಿದೆ. ಮುಂದೆ ಸ್ನೇಹವಾಗಿ, ಅದೇ ಸ್ನೇಹ ಇಬ್ಬರ ಮಧ್ಯೆ ಪ್ರೀತಿ ಅರಳಿಸಿದೆ.

ಮೂರು ವರ್ಷದಿಂದಇವರಿಬ್ಬರೂ ಪ್ರೀತಿಸುತ್ತಿದ್ದ ವಿಷಯ​ ರಿಷಿತಾ ಮನೆಯವರಿಗೆ ತಿಳಿದಿದೆ. ರಿಷಿತಾ ಸಹ ಮದುವೆ ಅಂತಾದ್ರೇ ಅದು ರಮೇಶ್​ನ ಮಾತ್ರ ಅಂತಾ ಕಡ್ಡಿಮುರಿದಂತೆ ಹೇಳಿದ್ದಳಂತೆ. ಆದರೆ, ಅವರ ಪ್ರೀತಿಯನ್ನು ರಿಷಿತಾ ಪೋಷಕರು ನಿರಾಕರಿಸಿದ್ದರು. ಇದರಿಂದ ಮನನೊಂದ ರಿಷಿತಾ, ಮೇ 28ರಂದು ನೇಣಿಗೆ ಶರಣಾಗಿದ್ದಳು.

ಪ್ರೀತಿಸಿದವಳೇ ಪ್ರಾಣಬಿಟ್ಟಿದ್ದರಿಂದ ಪ್ರಿಯಕರ ರಮೇಶ್‌ ಕೂಡ ಆಘಾತಕ್ಕೊಳಗಾಗಿದ್ದ.ಮೇ 29ರಂದು ತಮ್ಮ ಸೋದರಮಾವನ ಮನೆಗೆ ತೆರಳಿದ್ದಾನೆ. ನೊಂದ ರಮೇಶ್​ ನಾಲ್ಕು ಅಂತಸ್ತಿನ ಕಟ್ಟಡ ಮೇಲೇರಿ ಕೆಳಗೆ ಜಿಗಿದು ಪ್ರಾಣ ಬಿಟ್ಟಿದ್ದಾನೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸನತ್​ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : May 31, 2019, 1:47 PM IST

ABOUT THE AUTHOR

...view details