ನವದೆಹಲಿ:74ನೇ ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ಒಂದೇ ದಿನ ಬಾಕಿ. ಕೊರೊನಾ ವೈರಸ್ ನಡುವೆ ಈ ಸಲ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಆದರೆ ಪ್ರತಿ ವರ್ಷದಂತೆ ಈ ಸಲವೂ ದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯ ಮೇಲೆ ಸತತ ಏಳನೇ ಬಾರಿಗೆ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಅವರ ಎರಡನೇ ಭಾಷಣ ಇದಾಗಲಿದೆ.
ಈ ಹಿಂದಿನ ಸ್ವಾತಂತ್ರ್ಯ ದಿನಗಳಲ್ಲಿ ಪ್ರಧಾನಿ ಮೋದಿ ಅನೇಕ ಮಹತ್ವದ ಯೋಜನೆ ಘೋಷಣೆ ಮಾಡಿದ್ದು, ಕೆಲವೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ, ಯೋಜನಾ ಆಯೋಗ ರದ್ದು, ಮತ್ತು ರಕ್ಷಣಾ ಮುಖ್ಯಸ್ಥರ ಹುದ್ದೆ ಸೃಷ್ಟಿ ಸೇರಿಕೊಂಡಿವೆ.
ನಮೋ ಹಿಂದಿನ ಭಾಷಣಗಳ ಕೆಲವು ಪ್ರಮುಖ ಮುಖ್ಯಾಂಶಗಳು
2014ರ ಸ್ವಾತಂತ್ರ್ಯ ಭಾಷಣದ ಮುಖಾಂಶಗಳು ಇಂತಿವೆ
1. ಬಡ ನಾಗರಿಕರಿಗೋಸ್ಕರ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಘೋಷಣೆ
2.ಭಾರತದ ಕೌಶಲ್ಯ, ಪ್ರತಿಭೆ ಅನಾವರಣಗೊಳಿಸಲು ಮೇಕ್ ಇನ್ ಇಂಡಿಯಾ
3. ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸುವುದಾಗಿ ಘೋಷಣೆ
4. ಡಿಜಿಟಲ್ ಇಂಡಿಯಾ ಕನಸು ಸಾಕಾರಗೊಳಿಸಲು ಎಲೆಕ್ಟ್ರಾನಿಕ್ ಸರಕು ಉತ್ಪಾದನೆಗೆ ಹೆಚ್ಚಿನ ಒತ್ತು
5. ಸಂಸದರ ಆದರ್ಶ ಗ್ರಾಮ ಯೋಜನೆ ಘೋಷಣೆ, ಒಂದು ಗ್ರಾಮ ದತ್ತು ಪಡೆದುಕೊಂಡು ಮಾದರಿ ಗ್ರಾಮ ಮಾಡುವುದು
6. ದೇಶದ ಎಲ್ಲ ಶಾಲೆಗಳಲ್ಲಿ ಒಂದು ವರ್ಷದಲ್ಲಿ ಬಾಲಕಿಯರಿಗೋಸ್ಕರ ಪ್ರತ್ಯೇಕ ಶೌಚಾಲಯ ನಿರ್ಮಾಣದ ಗುರಿ
7. ಯೋಜನಾ ಆಯೋಗ ಬದಲಿಸಿ ಹೊಸ ಸಂಸ್ಥೆ ನೀತಿ ಆಯೋಗ ಘೋಷಣೆ
2015 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಮುಖ್ಯಾಂಶಗಳು:
1. ದೇಶದಲ್ಲಿ ಉದ್ಯಮಶೀಲತೆ ಉತ್ತೇಜಿಸಲು ಸ್ಟಾರ್ಟ್-ಅಪ್ ಇಂಡಿಯಾ ಘೋಷಣೆ
2. 1,000 ದಿನಗಳಲ್ಲಿ 18,500 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ
3. 'ಸಿ' ಮತ್ತು 'ಡಿ' ವರ್ಗದ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ವೇಳೆ ಸಂದರ್ಶನ ರದ್ದು
4. ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಮೂಲಕ 17 ಕೋಟಿ ಬ್ಯಾಂಕ್ ಖಾತೆ ತೆರೆಯುವ ಗುರಿ
5. ಕಪ್ಪು ಹಣ ಹೊಂದಿರುವ ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧಾರ
6. ಕೃಷಿ ಸಚಿವಾಲಯವನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಎಂದು ಮರುನಾಮಕರಣ
2016 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಮುಖ್ಯಾಂಶಗಳು:
1. ಎರಡು ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿರುವ ಘೋಷಣೆ
2. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ 21 ಕೋಟಿ ಜನರಿಗೆ ಅನುಕೂಲ
3. ಬಳಕೆ ಮಾಡದ 1,700 ಕಾನೂನು ಗುರುತಿಸಿ ಸಂಸತ್ತಿನಲ್ಲಿ ಅವುಗಳಿಗೆ ತಿದ್ದುಪಡಿ ಮಾಡುವ ಘೋಷಣೆ
4. "ಬಲೂಚಿಸ್ತಾನ್, ಗಿಲ್ಗಿಟ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನರಿಗೆ ಧನ್ಯವಾದ ಅರ್ಪಣೆ
5. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರ ಪಿಂಚಣಿ ಶೇ.20 ರಷ್ಟು ಏರಿಕೆ