ನವದೆಹಲಿ:ಕೊರೊನಾ ವೈರಸ್ ಪರೀಕ್ಷೆಯನ್ನು ದೇಶದಲ್ಲಿ ತ್ವರಿತವಾಗಿ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ, "ಪರೀಕ್ಷೆ, ಪತ್ತೆ, ಪ್ರತ್ಯೇಕತೆ ಮತ್ತು ಚಿಕಿತ್ಸೆ"ಯಿಂದ ಮಾತ್ರ ದೇಶದಲ್ಲಿ ಲಾಕ್‌ಡೌನ್ ಪರಿಣಾಮಕಾರಿಯಾಗುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ಗುರುತಿಸಿರುವ ಹಾಟ್‌ಸ್ಪಾಟ್‌ಗಳಲ್ಲಿ ಆ್ಯಂಟಿಬಾಡಿ ಪರೀಕ್ಷೆಗಳನ್ನು ಪ್ರಾರಂಭಿಸಲು ಐಸಿಎಂಆರ್ ಸರ್ಕಾರಕ್ಕೆ ನೀಡಿದ ಸಲಹೆಯನ್ನು ಚಿದಂಬರಂ ಸ್ವಾಗತಿಸಿದರು.
"ನಾವು ಪರೀಕ್ಷೆ, ಪರೀಕ್ಷೆ, ಪತ್ತೆ, ಪ್ರತ್ಯೇಕತೆ ಮತ್ತು ಚಿಕಿತ್ಸೆ ಮಾಡಿದರೆ ಮಾತ್ರ ಲಾಕ್‌ಡೌನ್ ಪರಿಣಾಮಕಾರಿಯಾಗುತ್ತದೆ. ಅದು ಜಪಾನ್, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರದಿಂದ ಕಲಿಯಬೇಕಾದ ಪಾಠವಾಗಿದೆ" ಎಂದು ಅವರು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಕೊರೊನಾ ಹಾಟ್‌ಸ್ಪಾಟ್‌ಗಳಲ್ಲಿ ಆರಂಭಿಸಲಾಗುವ 'ಕ್ಷಿಪ್ರ ಪ್ರತಿಕಾಯ ಪರೀಕ್ಷೆಗಳನ್ನು(rapid antibody tests) ಮಾಡಲು ಐಸಿಎಂಆರ್ ಸರ್ಕಾರಕ್ಕೆ ನೀಡಿದ ಸಲಹೆಯನ್ನು ನಾನು ಸ್ವಾಗತಿಸುತ್ತೇನೆ. ಅನೇಕ ವೈದ್ಯರ ಪ್ರಕಾರ, ಈ ಸಲಹೆಯು ತುಂಬಾ ಅಗತ್ಯವಾಗಿದೆ ಎಂದು ಹೇಳಿದ್ದಾರೆ.