ಪುಣೆ: ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದು ಅರವತ್ತು ಅಡಿ ಆಳದ ಬಾವಿಗೆ ಬಿದ್ದು ಪ್ರಾಣ ರಕ್ಷಣೆಗಾಗಿ ಹರಸಾಹಸ ಪಡ್ತಿದ್ದ ಚಿರತೆಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಆಹಾರ ಅರಸಿ 60 ಅಡಿ ಬಾವಿಗೆ ಬಿದ್ದ ಚಿರತೆ ಮುಂದೇನಾಯ್ತು? ವಿಡಿಯೋ ನೋಡಿ -
ಪುಣೆಯ ಜುನ್ನಾರ್ನ ಫಕ್ತೆ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೂರು ಗಂಟೆ ನಿರಂತರ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ರಕ್ಷಿಸಲಾಗಿದ್ದು ವೈದ್ಯಕೀಯ ಪರೀಕ್ಷೆ ನಡೆಸಿ ಸುರಕ್ಷಿತವಾಗಿ ಮತ್ತೆ ಕಾಡಿಗೆ ಬಿಡಲಾಗಿದೆ.
![ಆಹಾರ ಅರಸಿ 60 ಅಡಿ ಬಾವಿಗೆ ಬಿದ್ದ ಚಿರತೆ ಮುಂದೇನಾಯ್ತು? ವಿಡಿಯೋ ನೋಡಿ](https://etvbharatimages.akamaized.net/etvbharat/prod-images/768-512-3836989-thumbnail-3x2-lepord.jpg)
ಬಾವಿಗೆ ಬಿದ್ದ ಚಿರತೆ
ಪುಣೆಯ ಜುನ್ನಾರ್ನ ಫಕ್ತೆ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೂರು ಗಂಟೆ ನಿರಂತರ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ರಕ್ಷಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಮಾಣಿಕೋಹ್ ಚಿರತೆ ಸಂರಕ್ಷಣಾ ಕೇಂದ್ರ ಸಿಬ್ಬಂದಿ ಕಾರ್ಯಾಚರಣೆಗೆ ಸಹಕರಿಸಿದ್ದು, ಬೋನೊಂದನ್ನು ಬಾವಿಗೆ ಇಳಿಸಿ, ಚಿರತೆ ಅದರೊಳಗೆ ಸೇರುವಂತೆ ಮಾಡಿ ಮೇಲಕ್ಕೆತ್ತಿದ್ದಾರೆ.