ಮಹಾರಾಷ್ಟ್ರ: ನಾಯಿ ಮರಿಯೊಂದನ್ನು ಬೇಟೆಯಾಡಲು ಹೋಗಿ ನಾಯಿಮರಿ ಜೊತೆ ಚಿರತೆಯೂ ಬಾವಿಗೆ ಬಿದ್ದ ಘಟನೆ ಮಹರಾಷ್ಟ್ರದಲ್ಲಿ ನಡೆದಿದೆ.
ಬೇಟೆಯಾಡಲು ಹೋಗಿ ಬಾವಿಯಲ್ಲಿ ಪರಸ್ಪರ ಭೇಟಿ: ಏಳು ತಾಸು ಮೂಕ ವೇದನೆ, ಬಳಿಕ ರಕ್ಷಣೆ! - A leopard & a puppy
ನಾಯಿಮರಿ ಬೇಟೆಯಾಡಲು ಬೆನ್ನಟ್ಟಲು ಹೋಗಿ ಚಿರತೆ ಮತ್ತು ನಾಯಿ ಮರಿ ಎರಡೂ ಬಾವಿಗೆ ಬಿದ್ದ ಘಟನೆ ಮಹಾರಾಷ್ಟ್ರದ ನಂಡುರ್ಬಾರ್ ಜಿಲ್ಲೆಯ ತೆಂಬೆ ಗ್ರಾಮದಲ್ಲಿ ನಡೆದಿದೆ.
![ಬೇಟೆಯಾಡಲು ಹೋಗಿ ಬಾವಿಯಲ್ಲಿ ಪರಸ್ಪರ ಭೇಟಿ: ಏಳು ತಾಸು ಮೂಕ ವೇದನೆ, ಬಳಿಕ ರಕ್ಷಣೆ! A leopard & a puppy](https://etvbharatimages.akamaized.net/etvbharat/prod-images/768-512-6174100-thumbnail-3x2-klb.jpg)
ಚಿರತೆ ಮತ್ತು ನಾಯಿ ಮರಿ
ಸುಮಾರು 7 ತಾಸುಗಳ ಕಾಲ ಮೇಲಕ್ಕೆ ಬರಲಾಗದೆ ಎರಡೂ ಒಟ್ಟಿಗೆ ಬಾವಿಯಲ್ಲಿ ಸಂಕಟ ಅನುಭವಿಸುತ್ತಿದ್ದವು. ಬಳಿಕ ಸುಮಾರು 4 ಗಂಟೆಗಳ ಕಾಲ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎರಡೂ ಪ್ರಾಣಿಗಳನ್ನು ರಕ್ಷಿಸಿದ್ದಾರೆ.