ಕೋಟಾ (ರಾಜಸ್ಥಾನ ):ಹೆಚ್ಚು ಸಂಖ್ಯೆಯ ಹಸುಗಳು ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯ ಸುಲ್ತಾನಪುರ ಪ್ರದೇಶದಲ್ಲಿ ನಡೆದಿದೆ.
ಚರಂಡಿಯಲ್ಲಿ 20ಕ್ಕೂ ಹೆಚ್ಚು ಹಸುಗಳ ಕಳೇಬರ ಪತ್ತೆ... ಗ್ರಾಮಸ್ಥರಲ್ಲಿ ಅತಂಕ - ಹಸುಗಳ ಕಳೇಬರ ಪತ್ತೆ
ರಾಜಸ್ಥಾನದ ಕೋಟಾ ಜಿಲ್ಲೆಯ ಸುಲ್ತಾನಪುರ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಹಸುಗಳು ಸತ್ತು ಬಿದ್ದಿದ್ದನ್ನು ಕಂಡ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಹಸುಗಳು ಚರಂಡಿಯಲ್ಲಿ ಶವವಾಗಿ ಪತ್ತೆ
ಸುಲ್ತಾನಪುರದ ಗೋವನ್‌ಸರೋಲಾ ಎಂಬ ಗ್ರಾಮದ ಚರಂಡಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಹಸುಗಳು ಸತ್ತು ಬಿದ್ದಿದ್ದನ್ನು ಕಂಡ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಮಾಹಿತಿ ತಿಳಿದ ಸುಲ್ತಾನಪುರ ಪೊಲೀಸರು, ತಹಶೀಲ್ದಾರ್ ಘಟನಾ ಸ್ಥಳಕ್ಕೆ ತಲುಪಿ, ಪರಿಶೀಲನೆ ನಡೆಸಿದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವ ಹಿಂದೂ ಪರಿಷತ್, ಭಜರಂಗದ ಕಾರ್ಯಕರ್ತರು ತನಿಖೆಗೆ ಆಗ್ರಹಿಸಿದ್ದು, ಹಸುಗಳ ಸಾವಿನ ಹಿಂದಿರುವ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.