ಕಥುವಾ/ದೋಡಾ (ಜಮ್ಮು-ಕಾಶ್ಮೀರ): ಕೊರೊನಾ ವೈರಸ್ ತಡೆಗೆ ಜಾರಿಗೆ ತಂದಿರುವ ಲಾಕ್ಡೌನ್ನಿಂದಾಗಿ ನಿರ್ಗತಿಕರು, ಬಡವರು, ಕೂಲಿ ಮತ್ತು ಕಾರ್ಮಿಕರು ಹೊತ್ತಿನ ಊಟಕ್ಕೂ ಅಂಗಲಾಚುವ ಪರಿಸ್ಥಿತಿ ಎದುರಾಗಿದೆ.
ಸಾಮಾನ್ಯ ಜನರು, ಸಂಘ-ಸಂಸ್ಥೆಗಳು, ನಟ-ನಟಿಯರು, ಕ್ರಿಕೆಟ್ ತಾರೆಯರು, ರಾಜಕೀಯ ವ್ಯಕ್ತಿಗಳು, ಗಣ್ಯರು ಸೇರಿ ಬಡವರು ಮತ್ತು ನಿರ್ಗತಿಕರಿಗೆ ದಿನಸಿ ಮತ್ತು ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಇನ್ನೂ ಕೆಲವರು ಆಯಾ ಸರ್ಕಾರಗಳ ಪರಿಹಾರ ನಿಧಿಗೆ ಧನ ಸಹಾಯ ಕೂಡ ಮಾಡಿದ್ದಾರೆ.
ಆದರೆ, ಕಥುವಾ ಜಿಲ್ಲೆಯ ಬೈರಾ ಬೊರ್ತೈನ್ ಪಂಚಾಯಿತಿಯ 2,500 ನಿವಾಸಿಗಳು ಹಸಿವಿನಿಂದ ಬಳಲುತ್ತಿರುವವರಿಗಾಗಿ ಒಂದೊತ್ತಿನ ಊಟವನ್ನು ತ್ಯಾಗ ಮಾಡಲು ನಿರ್ಧರಿಸಿದ್ದಾರೆ. ಈ ಪಂಚಾಯಿತಿಯಲ್ಲಿ ಇರುವುದೇ 2,500ಕ್ಕೂ ಹೆಚ್ಚು ಮಂದಿ ಇದ್ದಾರೆ. ಇಂದು ನಡೆಸಿದ ವಿಶೇಷ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಂಚಾಯಿತಿ ಅಧ್ಯಕ್ಷ ಶಿವದೇವ್ ಸಿಂಗ್ ಹೇಳಿದರು.