ಕರ್ನಾಟಕ

karnataka

ETV Bharat / bharat

ವಿದ್ಯೆ ಹೇಳುವ ಗುರುವಿನಿಂದ ನೀಚಕೃತ್ಯ... ಪತ್ನಿ ಹೊಟ್ಟೆಯಲ್ಲಿರುವ ಕಂದಮ್ಮನನ್ನೂ ಸುಟ್ಟು ಹಾಕಿದ ಶಿಕ್ಷಕ! -  ಸಟ್ಟು ಹಾಕಿದ ಶಿಕ್ಷಕ

ಆತ ನೂರಾರು ಮಕ್ಕಳಿಗೆ ಪಾಠ ಹೇಳುವ ಶಿಕ್ಷಕ. ಮಕ್ಕಳಿಗೆ ಮಾದರಿಯಾಗಬೇಕಾಗಿದ್ದ ಶಿಕ್ಷಕ ಗರ್ಭಿಣಿ ಹೆಂಡ್ತಿಯನ್ನು ಸುಟ್ಟು ಹಾಕಿರುವ ಘಟನೆ ಆಂಧ್ರಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

ವಿದ್ಯ ಹೇಳುವ ಗುರು

By

Published : Jun 15, 2019, 1:48 PM IST

Updated : Jun 15, 2019, 2:35 PM IST

ಕೃಷ್ಣಾ: ಆಂಧ್ರಪ್ರದೇಶದಲ್ಲಿ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರಪಂಚ ನೋಡುವ ಮುನ್ನವೇ ತನ್ನ ಮಗುವನ್ನು ಮತ್ತು ಹೆಂಡ್ತಿಯನ್ನು ಶಿಕ್ಷಕನೊಬ್ಬ ಸುಟ್ಟು ಹಾಕಿರುವ ಘಟನೆ ಕೃಷ್ಣಾ ಜಿಲ್ಲೆಯ ಕೃಷ್ಣಲಂಕ ಗ್ರಾಮದಲ್ಲಿ ನಡೆದಿದೆ.

ಪತ್ನಿಯ ಹೊಟ್ಟೆಯಲ್ಲಿರುವ ಕಂದಮ್ಮನನ್ನೂ ಸಟ್ಟು ಹಾಕಿದ ಶಿಕ್ಷಕ!

ಗರ್ಭಿಣಿ ಮತ್ತು ಆಕೆ ಹೊಟ್ಟೆಯಲ್ಲಿರುವ ಮಗುವನ್ನು ಸುಟ್ಟು ಹಾಕಲು ಕಾರಣ ಅನುಮಾನ. ಹೆಂಡ್ತಿ ಶೈಲಜಾ ಕೃಷ್ಣಲಂಕ ಗ್ರಾಮದ ಖಾಸಗಿ ಶಾಲೆಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಪತಿ ಸಂಬಿಯಾರ್​ ಗುಡಿವಾಡ ಗ್ರಾಮದ ಖಾಸಗಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಆದ್ರೆ ಹೆಂಡ್ತಿ ಶೈಲಜಾ ಮೇಲೆ ವಿಪರೀತ ಅನುಮಾನ ಪಡುತ್ತಿದ್ದ ಸಂಬಿಯಾರ್​.

ಗರ್ಭಿಣಿ ಶೈಲಜಾ

ಇಂದು ಬೆಳಗ್ಗೆ ಹೆಂಡ್ತಿ ಶೈಲಜಾ ಮೇಲೆ ಅನುಮಾನ ಪಟ್ಟ ಸಂಬಿಯಾರ್​ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಹೆಂಡ್ತಿ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ಮಹಿಳೆ ಕಿರುಚಿಕೊಂಡಿರುವ ಶಬ್ದ ಕೇಳಿದ ನೆರೆಹೊರೆಯವರು ಸಹಾಯಕ್ಕೆ ದೌಡಾಯಿಸಿ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಸುಟ್ಟು ಗಾಯದಿಂದ ಶೈಲಜಾ ಬಳಲುತ್ತಿದ್ದಿರು. ಕೊನೆಗೂ ಚಿಕಿತ್ಸೆ ಫಲಿಸದೇ ತಾಯಿ-ಮಗು ಸಾವನ್ನಪ್ಪಿದ್ದಾರೆ. ಗಂಡನ ಅನುಮಾನವೇ ಅವರಿಬ್ಬರ ಪ್ರಾಣ ತೆಗೆದಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Jun 15, 2019, 2:35 PM IST

ABOUT THE AUTHOR

...view details