ನವದೆಹಲಿ:ಕೊರೊನಾ ವೈರಸ್ ಕುರಿತು ಈಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸಹ ಕಳವಳ ವ್ಯಕ್ತಪಡಿಸಿದ್ದು, ಒಂದು ವೈರಸ್ ವಿರುದ್ಧ ಹೋರಾಡಲಾಗದ ಮಾನವ ಅಸಹಾಯಕ ಎಂದಿದ್ದಾರೆ.
ಪ್ರಕರಣವೊಂದರ ವಿಚಾರಣೆ ಸಮಯದಲ್ಲಿ ವೈರಸ್ ಕುರಿತು ನ್ಯಾಯಾಧೀಶ ಅರುಣ ಮಿಶ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಇಂಥ ಮಹಾಮಾರಿ ರೋಗಗಳು ಪ್ರತಿ 100 ವರ್ಷಕ್ಕೊಮ್ಮೆ ಮರುಕಳಿಸುತ್ತಿರುತ್ತವೆ. ಆದರೆ ಈಗ ಕಲಿಯುಗದಲ್ಲಿ ಒಂದು ವೈರಸ್ ವಿರುದ್ಧ ಹೋರಾಡಲಾಗುತ್ತಿಲ್ಲ. ನಾವು ಎಷ್ಟೋ ಶಸ್ತ್ರಾಸ್ತ್ರಗಳನ್ನು ತಯಾರಿಸಿದ್ದೇವೆ. ಆದರೂ ಈ ವೈರಸ್ ವಿರುದ್ಧ ಮಾತ್ರ ನಾವು ವೈಯಕ್ತಿಕವಾಗಿಯೇ ಹೋರಾಡಬೇಕಿದೆ. ಮಾನವನ ಅಸಹಾಯಕತೆಯನ್ನು ನೋಡಿ.' ಎಂದು ಅರುಣ ಮಿಶ್ರಾ ಮಾರ್ಮಿಕವಾಗಿ ಹೇಳಿದರು.
ಇಬ್ಬರು ವಕೀಲರು ಬಂದರೆ ಸಾಕು: ಹಿರಿಯ ವಕೀಲರು ತಮ್ಮೊಂದಿಗೆ ಐದಾರು ಕಿರಿಯ ವಕೀಲರನ್ನು ಕರೆದುಕೊಂಡು ಕೋರ್ಟ್ ಹಾಲ್ಗೆ ಬರುವುದು ಬೇಡ ಎಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಂ.ಆರ್. ಶಾ ಅವರು ಹಿರಿಯ ವಕೀಲ ಆರ್ಯಮಾನ್ ಸುಂದರಂ ಅವರಿಗೆ ಸೂಚನೆ ನೀಡಿದರು.
ಹಿರಿಯ ವಕೀಲರು ತಮ್ಮೊಂದಿಗೆ ಓರ್ವ ಕಿರಿಯ ವಕೀಲರನ್ನು ಕರೆದುಕೊಂಡು ಬಂದರೆ ಸಾಕು. ನಮ್ಮ ಸುರಕ್ಷತೆಯನ್ನು ನಾವೇ ಮಾಡಿಕೊಳ್ಳಬೇಕಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ನ್ಯಾಯಾಧೀಶ ಎಂ.ಆರ್. ಶಾ ಹೇಳಿದರು.