ಆಂಧ್ರ ಪ್ರದೇಶ:ಮಹಿಳೆಯರ ಯೋಚನೆ ಎಂಥಹದ್ದೇ ಸಮಸ್ಯೆಗಳನ್ನೂ ಸಹ ಸುಲಭವಾಗಿ ಬಗೆಹರಿಸಬಲ್ಲದು. ಹೌದು, ತಾವು ಬೆಳೆದ ಬೆಳೆಗಳ ರಕ್ಷಣೆಗೆ ಈ ಮಹಿಳೆಯ ಹೊಸ ಐಡಿಯಾ ಸಹಕಾರಿಯಾಗಿದೆ.
ಕೋತಿಗಳ ಕಾಟಕ್ಕೆ ಬೇಸತ್ತ ಜನ... ಈ ಮಹಿಳೆಯ ಹೊಸ ಐಡಿಯಾದಿಂದ ಗ್ರಾಮಸ್ಥರು ನಿರಾಳ - andra pradesh news
ಆಂಧ್ರ ಪ್ರದೇಶದ ತಿಮ್ಮನಪಲ್ಲೆ ಎಂಬ ಗ್ರಾಮದ ಮಹಿಳೆ ವಿರಲ ಎಂಬುವರು ತಮ್ಮ ಮುಖಕ್ಕೆ ಘೋಸ್ಟ್ ಮಾಸ್ಕ್/ ಸ್ಪೂಕಿ ಮಾಸ್ಕ್ ಧರಿಸಿ ಮಂಗಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೈತರು ತಾವು ಬೆಳೆದ ಬೆಳೆಗಳ ರಕ್ಷಣೆಗಾಗಿ ಬಹಳಷ್ಟು ಶ್ರಮಿಸುತ್ತಾರೆ. ಯಾವುದೇ ಪ್ರಾಣಿ-ಪಕ್ಷಿ ಅದರಲ್ಲೂ ಮಂಗಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಲು ಮುಂದಾಗುತ್ತಾರೆ. ಆಂಧ್ರ ಪ್ರದೇಶದ ತಿಮ್ಮನಪಲ್ಲೆ ಎಂಬ ಗ್ರಾಮದ ಮಹಿಳೆ ವಿರಲ ಎಂಬುವರು ತಮ್ಮ ಮುಖಕ್ಕೆ ಘೋಸ್ಟ್ ಮಾಸ್ಕ್/ ಸ್ಪೂಕಿ ಮಾಸ್ಕ್ ಧರಿಸಿ ಮಂಗಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಳ್ಳಿಯಲ್ಲಿ ಹೆಚ್ಚಾಗಿ ಜೋಳವನ್ನು ಬೆಳೆಯುತ್ತಾರೆ. ಆದ್ರೆ ಮಂಗಗಳು ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸಿ ಗ್ರಾಮಸ್ಥರನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದವು. ಹಾಗಾಗಿ ವಿರಲ 150 ರೂಪಾಯಿ ಮೌಲ್ಯದ ಸಾಮಾನ್ಯ ಭೂತ ಮುಖವಾಡ/ ಘೋಸ್ಟ್ ಮಾಸ್ಕ್ ಧರಿಸಿ ಓಡಾಡಲು ಆರಂಭಿಸಿದರು. ಇದರಿಂದ ಕೋತಿಗಳು ಹೆದರಿ ದಿಕ್ಕಾಪಾಲಾದವು. ಇದು ಈ ಹಳ್ಳಿಯ ಇತರೆ ರೈತ ವರ್ಗಕ್ಕೂ ಸಹಕಾರಿಯಾಗಿದೆ. ಕೇವಲ 150 ರೂಪಾಯಿಯ ಘೋಸ್ಟ್ ಮಾಸ್ಕ್ ಮೂಲಕ ತನ್ನ 6 ಎಕರೆ ಜೋಳದ ಹೊಲವನ್ನು ರಕ್ಷಿಸಲು ಸಾಧ್ಯವಾಯಿತು ಎಂದು ವಿರಲ ಸಂತಸ ವ್ಯಕ್ತಪಡಿಸಿದ್ದಾರೆ.