ಕರೀಂನಗರ(ತೆಲಂಗಾಣ): ಕುಡಿದ ಮತ್ತಿನಲ್ಲಿ ಸ್ನೇಹಿತನೊಬ್ಬ ನಿನ್ನನ್ನ ಕೊಲೆ ಮಾಡುತ್ತೀನಿ ಎಂದು ಹೇಳಿದ್ದಕ್ಕೆ ಹೆದರಿದ ಮತ್ತೊಬ್ಬ ಗೆಳೆಯ ನಿಜವಾಗಿಯೂ ಕೊಲೆ ಮಾಡಿರುವ ಘಟನೆ ಕರೀಂನಗರ ಜಿಲ್ಲೆಯ ನುಸ್ತುಲಾಪುರ್ ಎಂಬಲ್ಲಿ ನಡೆದಿದೆ.
ಎಣ್ಣೆ ಏಟಲ್ಲಿ ಕೊಲೆ ಮಾಡ್ತಿನಿ ಅಂದವನೇ ಕೊಲೆಯಾಗಿ ಹೋದ! - ಸ್ನೇಹಿತನ ಕೊಲೆ
ಸ್ನೇಹಿತನಿಂದ ಸ್ನೇಹಿತನೇ ಕೊಲೆಯಾದ ದಾರೂಣ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ.
ಸ್ನೇಹಿತನಿಂದಲೇ ಸ್ನೇಹಿತನ ಕೊಲೆ
ಪ್ರವೀಣ್ ಮತ್ತು ಅಖಿಲ್ ಎಂಬ ಗೆಳೆಯರು ಪ್ರತಿ ದಿನ ಕುಳಿತು ಒಟ್ಟಿಗೆ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಪ್ರವೀಣ್ ಮಾತು ಮಾತಿಗು ನಿನ್ನನ್ನ ಕೊಲೆ ಮಾಡ್ತೀನಿ ಎಂದು ಅಖಿಲ್ನನ್ನ ಬೆದರಿಸುತ್ತಿದ್ದ.
ಪ್ರವೀಣ್ ಮಾತನ್ನೆ ಮನಸಲ್ಲಿಟ್ಟುಕೊಂಡು ನಿಜವಾಗಿಯೂ ಹೆದರಿದ ಅವನ ಸ್ನೇಹಿತ ಅಖಿಲ್, ಚಾಕುವಿನಿಂದ ಪ್ರವೀಣ್ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಬಲೆ ಬೀಸಿದ್ದಾರೆ.