ಗುಜರಾತ್: ಜೂಜಾಟದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಜಾನಪದ ಕಲಾವಿದನೋರ್ವ ಜಾಮೀನು ಪಡೆದ ಬಳಿಕ ಪೊಲೀಸ್ ಠಾಣೆಯೊಳಗಡೆಯೇ ಭಜನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪೊಲೀಸ್ ಠಾಣೆಯಲ್ಲೇ ಆರೋಪಿ ಕಲಾವಿದನಿಂದ ಸಂಗೀತ ಕಚೇರಿ ಜಾನಪದ ಗಾಯಕ ಹೇಮಂತ್ ದೇವ್ ಹಾಗೂ ಆತನೊಂದಿಗಿದ್ದ ಇತರರನ್ನು ಜುಲೈ 8 ರಂದು ಜೂಜಾಟದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಆದರೆ ಜು.9 ರಂದೇ ಹೇಮಂತ್ಗೆ ಜಾಮೀನು ಸಿಕ್ಕಿದೆ.
ಸುರೇಂದ್ರನಗರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿದ್ದ ಆತ, ಜಾಮೀನು ಪಡೆದು ಹೋಗುವ ಮುನ್ನ ಸಂಗೀತ ಕಚೇರಿ ನಡೆಸಿದ್ದಾರೆ. ಹಾರ್ಮೋನಿಯಂ ನುಡಿಸುತ್ತಾ ಭಜನೆ ಮಾಡಿದ್ದಾನೆ. ಅಲ್ಲದೇ ಆತ ಭಜನೆ ಮಾಡುವ ವೇಳೆ ಠಾಣೆಯ ಪಿಎಸ್ಐ ಆರೋಪಿ ಕಲಾವಿದನಿಗೆ ಹಣವನ್ನು ನೀಡುತ್ತಿರುವ ದೃಶ್ಯ ಕೂಡ ವಿಡಿಯೋದಲ್ಲಿ ಕಂಡು ಬಂದಿದೆ.
ಪಿಎಸ್ಐ ಉಪಸ್ಥಿತಿಯಲ್ಲಿ ಪೊಲೀಸ್ ಠಾಣೆಯಲ್ಲೇ ಸಂಗೀತ ಕಚೇರಿ ನಡೆದಿದ್ದರಿಂದ ಪೊಲೀಸರ ಕಾರ್ಯಕ್ಷಮತೆಯ ವಿರುದ್ಧ ಇದೀಗ ಪ್ರಶ್ನೆಗಳು ಎದ್ದಿವೆ.